ಇರಾನ್ ಸೇನಾ ಉನ್ನತಾಧಿಕಾರಿ ಹತ್ಯೆ: ಮಧ್ಯ ಪ್ರಾಚ್ಯಾದಲ್ಲಿ ಹೆಚ್ಚುವರಿ ಸೇನಾಪಡೆ ನಿಯೋಜಿಸಿದ ಅಮೆರಿಕಾ
ಇರಾನ್ ನ ಸೇನಾಧಿಕಾರಿಯ ಹತ್ಯೆಯ ನಂತರ ತನ್ನ ಸೇನೆಯನ್ನು ಬಲಪಡಿಸಲು ಅಮೆರಿಕಾ ಮಧ್ಯ ಪ್ರಾಚ್ಯಾಕ್ಕೆ ಸುಮಾರು 3 ಸಾವಿರ ಸೇನಾಪಡೆಯನ್ನು ಕಳುಹಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ವಾಷಿಂಗ್ಟನ್: ಇರಾನ್ ನ ಸೇನಾಧಿಕಾರಿಯ ಹತ್ಯೆಯ ನಂತರ ತನ್ನ ಸೇನೆಯನ್ನು ಬಲಪಡಿಸಲು ಅಮೆರಿಕಾ ಮಧ್ಯ ಪ್ರಾಚ್ಯಾಕ್ಕೆ ಸುಮಾರು 3 ಸಾವಿರ ಸೇನಾಪಡೆಯನ್ನು ಕಳುಹಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಉತ್ತರ ಕ್ಯಾರೊಲಿನಾದ ಫೋರ್ಟ್ ಬ್ರಗ್ಗ್ ನ 82ನೇ ಏರ್ ಬೋರ್ನ್ ವಲಯದಿಂದ ಸೇನಾಪಡೆ ಮಧ್ಯ ಪ್ರಾಚ್ಯಾಕ್ಕೆ ಹೋಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕಾದ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಕುವೈತ್ ನಲ್ಲಿ ನಿಯೋಜನೆಗೊಂಡಿರುವ 82ನೇ ಏರ್ ಬೋರ್ನ್ ನ 700 ಸೈನಿಕರಿಗೆ ಹೆಚ್ಚುವರಿಯಾಗಿ ನಿನ್ನೆ 3 ಸಾವಿರಕ್ಕೂ ಹೆಚ್ಚು ಸೇನಾಪಡೆಯನ್ನು ಕಳುಹಿಸಲಾಗಿದೆ.
ಇರಾನ್ ನ ಸೇನಾಧಿಕಾರಿಯ ಹತ್ಯೆಯ ನಂತರ ಬಾಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಹೊರಗೆ ಅಲ್ಲಿನ ಸೈನಿಕರು ಮತ್ತು ಅವರ ಬೆಂಬಲಿಗರು ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತೀವ್ರ ಭದ್ರತೆ ಕ್ರಮವಾಗಿ ಅಮೆರಿಕಾ ಈ ಕ್ರಮ ಕೈಗೊಂಡಿದೆ.
ಇರಾನ್ ನ ಕುಡ್ಸ್ ಪಡೆಯ ಕಮಾಂಡರ್ ಜನರಲ್ ಸೊಲೈಮಾನಿ ಅವರ ಹತ್ಯೆಗೆ ಪ್ರತೀಕಾರವಾಗಿ ಇರಾನ್ ದಾಳಿಗೆ ಮುಂದಾಗಬಹುದು ಎಂಬ ಯೋಜನೆಯಿಂದಲೇ ಅಮೆರಿಕಾ ಹೆಚ್ಚುವರಿ ಸೇನಾಪಡೆ ಕಳುಹಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.