ಬಾಂಗ್ಲಾದಿಂದ ಭಾರತಕ್ಕೆ ಸಿಮೆಂಟ್ ರಫ್ತು ಪ್ರಮಾಣ ವೃದ್ಧಿ
ಬಾಂಗ್ಲಾದೇಶದಿಂದ ಭಾರತಕ್ಕೆ 2018-19 ನೇ ಸಾಲಿನಲ್ಲಿ 4660,883,56 ಡಾಲರ್ ಮೊತ್ತದ ಸಿಮೆಂಟ್ ರಫ್ತು ಆಗಿದೆ ಎಂದು ಬಾಂಗ್ಲಾದೇಶ ರಫ್ತು ಉತ್ತೇಜನಾ ಬ್ಯೂರೋ ತಿಳಿಸಿದೆ.
ಢಾಕಾ: ಬಾಂಗ್ಲಾದೇಶದಿಂದ ಭಾರತಕ್ಕೆ 2018-19 ನೇ ಸಾಲಿನಲ್ಲಿ 4660,883,56 ಡಾಲರ್ ಮೊತ್ತದ ಸಿಮೆಂಟ್ ರಫ್ತು ಆಗಿದೆ ಎಂದು ಬಾಂಗ್ಲಾದೇಶ ರಫ್ತು ಉತ್ತೇಜನಾ ಬ್ಯೂರೋ ತಿಳಿಸಿದೆ.
2014-15 ರಲ್ಲಿ 786,839,85 ಡಾಲರ್, 2016-17ನೇ ಸಾಲಿನಲ್ಲಿ 6779,809,84 ಡಾಲರ್, 2017-18 ರಲ್ಲಿ 7905,618,73 ಡಾಲರ್ ಮೊತ್ತದ ಸಿಮೆಂಟ್ ರಫ್ತಾಗಿದೆ ಎಂದು ಬ್ಯೂರೋ ತಿಳಿಸಿದೆ.
ಅಂತಾರಾಷ್ಟ್ರೀಯ ಗುಣಮಟ್ಟದಿಂದ ಬಾಂಗ್ಲಾದೇಶ ಸಿಮೆಂಟ್ ಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ನಾಲ್ಕನೇ ಪೀಳಿಗೆಯ ಹೈಡ್ರಾಕ್ಸಿಈಥೈಲ್ ಸೆಲ್ಯುಲೋಸ್ ತಂತ್ರಜ್ಞಾನ ವನ್ನು ಸಿಮೆಂಟ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಬ್ಯೂರೋ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.