ವಿದೇಶ

ತನ್ನ ಆ್ಯಪ್‌ಗಳ ಮೇಲೆ ನಿಷೇಧ ಭಾರತದ  'ತಾರತಮ್ಯ ಧೋರಣೆ'ಗೆ ಸಾಕ್ಷಿ: ಚೀನಾ ಆರೋಪ

Raghavendra Adiga

ಬೀಜಿಂಗ್: ಭಾರತವು ಚೀನಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದು ಅದರ  "ತಾರತಮ್ಯ" ಧೋರಣೆಯಾಗಿದೆ ಎಂದು ಚೀನಾ ಹೇಳಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ "ಧಕ್ಕೆ" ಯಾಗುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಕೆಲ ದಿನಗಳ ನಂತರ ಚೀನಾ ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದೆ. 

"ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಭಾರತದ ರಕ್ಷಣೆ, ರಾಷ್ಟ್ರದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ" ಯ ಹಾನಿಗೆ ಯತ್ನಿಸಿದ್ದಕ್ಕಾಗಿ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸೋಮವಾರ ನಿಷೇಧಿಸಿದೆ. ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನ್ಯದೊಂದಿಗೆ ಗಡಿಯಲ್ಲಿ ನಡೆದ ಸಂಘ್ರಷದ ಬಳಿಕ ಈ ನಿಷೇಧ ಜಾರಿಯಾಗಿದೆ."

"ಮೊದಲನೆಯದಾಗಿ, ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳ ವಿರುದ್ಧ ಚೀನಾ ಯಾವುದೇ ನಿರ್ಬಂಧಿತ ಮತ್ತು ತಾರತಮ್ಯದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಚೀನಾ ಹೇಳಿದೆ. 

"ಭಾರತದ ಈ ನಿರ್ಧಾರ ಸಂಬಂಧಿತ ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತದೆ" ಎಂದು ನೆರೆರಾಷ್ಟ್ರ ತನ್ನ ಹೇಳಿಕೆಯಲ್ಲಿ ವಿವರಿಸಿದೆ. ಮಾತ್ರವಲ್ಲದೆ "ಚೀನಾ ಮತ್ತು ಚೀನಾದ ಉದ್ಯಮಗಳ ವಿರುದ್ಧದ ತಾರತಮ್ಯವನ್ನು ಭಾರತ ತಕ್ಷಣ ನಿಲ್ಲಿಸಲಿದೆ ಎಂದು ತಾನು ಭರವಸೆ ಹೊಂದಿದ್ದೇನೆ" ಎಂದು ಸಹ ಹೇಳಿದೆ. 

SCROLL FOR NEXT