ವಿದೇಶ

ಭಿನ್ನಾಭಿಪ್ರಾಯಗಳನ್ನು ವಿವಾದಕ್ಕೆ ಎಡೆಮಾಡಿಕೊಡದಿರಲು ಭಾರತ- ಚೀನಾ ಸಮ್ಮತಿ

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಲಡಾಖ್ ಪ್ರದೇಶಕ್ಕೆ ಭೇಟಿ ನೀಡುವುದರೊಂದಿಗೆ ರಾಜತಾಂತ್ರಿಕ ಒತ್ತಡವೇರ್ಪಟ್ಟಿದ್ದು, ಭಾರತ- ಚೀನಾ ನಡುವಣ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಮಾತುಕತೆಗಳು ನಡೆಯುತ್ತಿವೆ.

ಭಾನುವಾರ ಸಂಜೆ ಚೀನಾ ವಿದೇಶಾಂಗ ಸಚಿವ , ರಾಜ್ಯ ಕೌನ್ಸಿಲರ್ ಮತ್ತು ವಿಶೇಷ ಪ್ರತಿನಿಧಿ ವಾಂಗ್ ಯಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಿನೋ-ಇಂಡಿಯಾ ಗಡಿ ವಿವಾದ ಬಗ್ಗೆ ದೂರವಾಣಿ  ಮೂಲಕ ಮಾತುಕತೆ ನಡೆಸಿದ್ದಾರೆ.

ಸೋಮವಾರ ಚೀನಾ ಹೇಳಿಕೆ ಬಿಡುಗಡೆಯಾಗಿದ್ದು, ಭಿನ್ನಾಭಿಪ್ರಾಯಗಳನ್ನು ವಿವಾದಕ್ಕೆ ಆಸ್ಪದ ನೀಡದಂತೆ ಉಭಯ ದೇಶಗಳು ಒಪ್ಪಿಕೊಂಡಿವೆ. ಆದಾಗ್ಯೂ, ತನ್ನ ಪ್ರದೇಶವೆಂದು ಹೇಳಿಕೊಳ್ಳುತ್ತಿರುವ ಜಾಗದಿಂದ ಹಿಂದೆ ಸರಿಯಲು ಚೀನಾ ಒಲವು ತೋರುತ್ತಿಲ್ಲ.

SCROLL FOR NEXT