ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ 
ವಿದೇಶ

ಟಿಬೆಟ್ ಮೇಲೆ ಅತಿರೇಕದ ವರ್ತನೆ: ಅಮೆರಿಕಾ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ!

ಟಿಬೆಟ್ ಮೇಲಿನ ಅತಿರೇಕದ ವರ್ತನೆಯೊಂದಿಗೆ ಅಮೆರಿಕಾದ ಸಿಬ್ಬಂದಿ  ಮೇಲೆ ಚೀನಾ ವೀಸಾ ನಿರ್ಬಂಧವನ್ನು ಹೇರಿದೆ.ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ  ನಿರ್ಬಂಧವನ್ನು ಅಮೆರಿಕಾ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊ ಹೇರಿದ ಬೆನ್ನಲ್ಲೇ, ಚೀನಾ ಈ ಕ್ರಮ ಕೈಗೊಂಡಿದೆ.

ಬೀಜಿಂಗ್: ಟಿಬೆಟ್ ಮೇಲಿನ ಅತಿರೇಕದ ವರ್ತನೆಯೊಂದಿಗೆ ಅಮೆರಿಕಾದ ಸಿಬ್ಬಂದಿ ಮೇಲೆ ಚೀನಾ ವೀಸಾ ನಿರ್ಬಂಧವನ್ನು ಹೇರಿದೆ. 2018ರ  ಕಾಯ್ದೆಯೊಂದರ ಅಡಿಯಲ್ಲಿ ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ  ನಿರ್ಬಂಧವನ್ನು ಅಮೆರಿಕಾ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊ ಹೇರಿದ ಬೆನ್ನಲ್ಲೇ, ಚೀನಾ ಈ ಕ್ರಮ ಕೈಗೊಂಡಿದೆ.

ಅಮೆರಿಕದಿಂದ ತಪ್ಪು ನಿರ್ಧಾರಗಳಿಗೆ ಪ್ರತಿಯಾಗಿ ಆ ದೇಶದ   ಸಿಬ್ಬಂದಿ ಮೇಲೆ ವೀಸಾ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದೆ.  ಟಿಬೆಟ್ ವಿಚಾರದಲ್ಲಿ ಕೆಟ್ಟದ್ದಾಗಿ ಅಮೆರಿಕ ವರ್ತಿಸುತ್ತಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಹೇಳಿಕೆಯನ್ನು ಉಲ್ಲೇಖಿಸಿ ಸ್ಪೂಟಿಕ್ ವರದಿ ಮಾಡಿದೆ.

ಇದಕ್ಕೂ ಮುನ್ನ ಟಿಬೆಟ್ ಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಚೀನಾ ಸರ್ಕಾರ ಹಾಗೂ ಕಮ್ಯೂನಿಸ್ಟ್ ಪಕ್ಷದ ಅಧಿಕಾರಿಗಳಿಗೆ ನಾನು ಇಂದು ವೀಸಾ ನಿರ್ಬಂಧವನ್ನು ವಿಧಿಸಿದ್ದೇನೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ  ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ನಿಂದ ಇರಾನ್ ಗುಪ್ತಚರ ಇಲಾಖೆ ಮುಖ್ಯಸ್ಥರ ಹತ್ಯೆ?; ಇದರಿಂದೆಲ್ಲಾ ನಾಯಕತ್ವಕ್ಕೆ ಮಾರಕ ಹೊಡೆತ ಬೀಳಲ್ಲ- ಇರಾನ್

ಉಪ ಚುನಾವಣೆ 2026: ಸಿದ್ದರಾಮಯ್ಯ ಸಂಧಾನ ಯಶಸ್ವಿ, ಬಾಗಲಕೋಟೆ ಕಾಂಗ್ರೆಸ್ ಕದನಕ್ಕೆ ಕೊನೆಗೂ ತೆರೆ!

'ನನ್ನ ಘನತೆಗೆ ಧಕ್ಕೆ, ಪ್ರಚಾರಕ್ಕೆ ಬರಲ್ಲ..' 'ನಿರ್ದೇಶಕ ಪ್ರೇಮ್ ಗೆ ಮೊದಲೇ ಎಚ್ಚರಿಕೆ ನೀಡಿದ್ದೆ..': ಬಾಲಿವುಡ್ ನಟಿ Nora Fatehi ಶಾಕಿಂಗ್ ಹೇಳಿಕೆ

ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶಾಕ್; ಇನ್ನುಮುಂದೆ ಉತ್ತಮ ಕ್ರೆಡಿಟ್ ಸ್ಕೋರ್ ಕಡ್ಡಾಯ!

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸೀಟ್ ಚಾರ್ಜ್‌ಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಇನ್ನು ಮುಂದೆ ಶೇ.60ರಷ್ಟು ಸೀಟುಗಳು ಉಚಿತ..!

SCROLL FOR NEXT