ವಿದೇಶ

ವಿದ್ಯಾರ್ಥಿ ವೀಸಾ ನಿಯಮ: ಮೊಕದ್ದಮೆ ಹೂಡಿದ ಹಾರ್ವರ್ಡ್, ಎಂಐಟಿ ವಿವಿ, ಅಮೆರಿಕಾ ಸರ್ಕಾರದ ಜೊತೆ ಭಾರತ ಮಾತುಕತೆ

Sumana Upadhyaya

ನ್ಯೂಯಾರ್ಕ್: ಅಮೆರಿಕದಲ್ಲಿ ನೆಲೆಸಿರುವ ವಿದೇಶಗಳ ವಿದ್ಯಾರ್ಥಿಗಳು ಕೋರ್ಸ್ ಗಳ ಕಲಿಕೆಗೆ ಖುದ್ದಾಗಿ ತರಗತಿಗೆ ಹೋಗಬೇಕು, ಆನ್ ಲೈನ್ ನಲ್ಲಿ ಕೋರ್ಸ್ ತೆಗೆದುಕೊಳ್ಳುವವರು ದೇಶ ಬಿಟ್ಟು ಹೋಗಬೇಕು ಎಂಬ ವಲಸೆ ಮತ್ತು ಸುಂಕ ನಿರ್ದೇಶನಾಲಯದ ನೀತಿಯನ್ನು ಪ್ರಶ್ನಿಸಿ ಹಾರ್ವರ್ಡ್ ಯೂನಿವರ್ಸಿಟಿ ಮತ್ತು ಮಸ್ಸಚುಸೆಟ್ಸ್ ತಾಂತ್ರಿಕ ಸಂಸ್ಥೆ ಕಾನೂನು ಮೊಕದ್ದಮೆ ಹೂಡಿದೆ.

ಬೊಸ್ಟೊನ್ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಯಲ್ಲಿ, ಹಾರ್ವರ್ಡ್ ಮತ್ತು ಎಂಐಟಿ  ವಿಶ್ವವಿದ್ಯಾಲಯಗಳು ಇದನ್ನು ತಾತ್ಕಾಲಿಕ ಆದೇಶವನ್ನಾಗಿ ಹೊರಡಿಸಿ ಹೊರದೇಶಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಕಲಿಕೆಗೆ ಅವಕಾಶ ನೀಡಬೇಕು. ವಲಸೆ ನಿರ್ದೇಶನಾಲಯ ಹೊರಡಿಸಿರುವ ಆದೇಶ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಎಂಐಟಿ ಅಧ್ಯಕ್ಷ ರಫೇಲ್ ರೈಫ್ ಒತ್ತಾಯಿಸಿದ್ದಾರೆ.

ಅಮೆರಿಕ ಸರ್ಕಾರದ ಈ ನಿರ್ಧಾರ ವಿದೇಶಿ ವಿದ್ಯಾರ್ಥಿಗಳ ಜೀವನ, ಅವರ ಶೈಕ್ಷಣಿಕ ಮತ್ತು ಸಂಶೋಧನೆ ಆಸೆ ಹೊಂದಿರುವವರಿಗೆ ಕಷ್ಟವಾಗುತ್ತದೆ. ಏಕಾಏಕಿ ಕಾನೂನು ತಂದರೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತದೆ ಎಂದು ಮೊಕದ್ದಮೆಯಲ್ಲಿ ವಿವರಿಸಲಾಗಿದೆ.

SCROLL FOR NEXT