ಸಿಯೋಲ್: ವಿಡಿಯೋ ಶೇರಿಂಗ್ ಆಪ್ ಟಿಕ್ ಟಾಕ್ ಗೆ ದಕ್ಷಿಣ ಕೊರಿಯಾದ ನಿಯಂತ್ರಕ $1,55,000 ದಂಡ ವಿಧಿಸಿದೆ.
ಮಕ್ಕಳ ಡಾಟಾವನ್ನು ದುರುಪಯೋಗಪಡಿಸಿಕೊಂಡಿದ್ದರ ಆರೋಪದಡಿ ಟಿಕ್ ಟಾಕ್ ಗೆ ದಂಡ ವಿಧಿಸಿದೆ. ಈ ಬೆಳವಣಿಗೆ ನಂತರ ದಕ್ಷಿಣ ಕೊರಿಯಾದಲ್ಲಿ ಟಿಕ್ ಟಾಕ್ ಬಳಕೆದಾರರ ಪ್ರೈವೆಸಿಗೆ ಸಂಬಂಧಿಸಿದಂತೆ ಆತಂಕ ಉಂಟಾಗಿದೆ.
ದಕ್ಷಿಣ ಕೊರಿಯಾದ ಡಾಟಾಗಳ ಮೇಲೆ ಗಮನಹರಿಸುವ ಕೊರಿಯಾ ಕಮ್ಯುನಿಕೇಷನ್ಸ್ ಆಯೋಗ ( ಕೆಸಿಸಿ) ಟಿಕ್ ಟಾಕ್ 14 ವರ್ಷದ ಮಕ್ಕಳ ಡಾಟಾವನ್ನು ಅನುಮತಿ ಇಲ್ಲದೇ ಕಲೆಹಾಕಿರುವುದನ್ನು ಗಮನಿಸಿದೆ ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ ಆರೋಪದಡಿ ಸಂಸ್ಥೆಯ ವಾರ್ಷಿಕ ಆದಾಯದ ಶೇ.3 ಪಟ್ಟು ಮೊತ್ತವನ್ನು ದಂಡ ವಿಧಿಸಿದೆ.