ವಿದೇಶ

ಪಶ್ಚಿಮ ಸುಡಾನ್‍: ಸಶಸ್ತ್ರ ದಾಳಿಯಲ್ಲಿ 60 ಜನರ ಸಾವು, ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ

Manjula VN

ವಿಶ್ವಸಂಸ್ಥೆ: ಸುಡಾನ್ ನ ಪಶ್ಚಿಮ ಡಾರ್ಫರ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. 

ಘಟನೆಯ ನಂತರ ಸುಡಾನ್ ಪ್ರಧಾನಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಎ) ತಿಳಿಸಿದೆ.

"ಜುಲೈ 25 ರಂದು ಪಶ್ಚಿಮ ಡಾರ್ಫರ್‌ನ ಬೀಡಾ ಪ್ರದೇಶದ ಉತ್ತರದ ಮಾಸ್ಟರಿ ಗ್ರಾಮದಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ" ಎಂದು ಒಸಿಎಎ ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT