ಸಾಂದರ್ಭಿಕ ಚಿತ್ರ 
ವಿದೇಶ

ಕೊರೋನಾ: ವಿಶ್ವದಲ್ಲಿ 4 ಲಕ್ಷ 25 ಸಾವಿರ ದಾಟಿದ ಸಾವಿನ ಸಂಖ್ಯೆ, 76 ಲಕ್ಷಕ್ಕೂ ಅಧಿಕ ಸೋಂಕಿತರು!

ವಿಶ್ವ ಮಟ್ಟದಲ್ಲಿ 4 ಲಕ್ಷದ 25 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್ ನ ಸೋಂಕಿತ ಪ್ರಕರಣಗಳು ಇದುವರೆಗೆ 76 ಲಕ್ಷದ 32 ಸಾವಿರದ 517 ಆಗಿದೆ. ಅವರಲ್ಲಿ 4 ಲಕ್ಷದ 25 ಸಾವಿರದ 282 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ಯಾರಿಸ್: ವಿಶ್ವ ಮಟ್ಟದಲ್ಲಿ 4 ಲಕ್ಷದ 25 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್  ಸೋಂಕಿತ ಪ್ರಕರಣಗಳು ಇದುವರೆಗೆ 76 ಲಕ್ಷದ 32 ಸಾವಿರದ 517 ಆಗಿದೆ. ಅವರಲ್ಲಿ 4 ಲಕ್ಷದ 25 ಸಾವಿರದ 282 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಯುರೋಪ್ ಖಂಡದಲ್ಲಿ 1 ಲಕ್ಷದ 86 ಸಾವಿರದ 843 ಸಾವು ಸಂಭವಿಸಿದರೆ ಇಲ್ಲಿ ಸೋಂಕಿತರ ಸಂಖ್ಯೆ 23 ಲಕ್ಷದ 63 ಸಾವಿರದ 538 ಆಗಿದೆ. ಲ್ಯಾಟಿನ್ ಅಮೆರಿಕದಲ್ಲಿ ಪ್ರಕರಣಗಳು ಅತಿ ಹೆಚ್ಚಾಗುತ್ತಿದ್ದು ಇಲ್ಲಿ ಇದುವರೆಗೆ 76 ಸಾವಿರದ 343 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 15 ಲಕ್ಷದ 69 ಸಾವಿರದ 938 ಆಗಿದೆ.

ಅಮೆರಿಕದಲ್ಲಿ ಇಲ್ಲಿಯವರೆಗೆ ಕೊರೋನಾದಿಂದ ಹೆಚ್ಚು ಸಾವು ಸಂಭವಿಸಿದ್ದು 1 ಲಕ್ಷದ 14 ಸಾವಿರದ 643 ಮಂದಿ ಮೃತಪಟ್ಟಿದ್ದಾರೆ.

ನಂತರದ ಸ್ಥಾನದಲ್ಲಿ ಬ್ರೆಜಿಲ್ ದೇಶವಿದೆ. ಇಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 41 ಸಾವಿರದ 828. ಬ್ರಿಟನ್ ಮೂರನೇ ಸ್ಥಾನದಲ್ಲಿದ್ದು 41 ಸಾವಿರದ 481 ಮಂದಿ ಮೃತಪಟ್ಟಿದ್ದಾರೆ. ನಂತರದ ಸ್ಥಾನಗಳಲ್ಲಿ ಇಟಲಿ(34 ಸಾವಿರದ 223 ಸಾವಿನ ಸಂಖ್ಯೆ) ಮತ್ತು ಫ್ರಾನ್ಸ್ (29 ಸಾವಿರದ 374)ಗಳಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT