ವಿದೇಶ

ಭಾರತದ ಭೂಭಾಗ ಒಳಗೊಂಡ ಹೊಸ ಭೂಪಟ ಮಸೂದೆಗೆ ನೇಪಾಳ ಅಧ್ಯಕ್ಷರ ಅಂಕಿತ

Lingaraj Badiger

ಕಠ್ಮಂಡು: ಭಾರತದ ಕೆಲವು ಪ್ರಾಂತ್ಯಗಳನ್ನೂ ತನ್ನದೆಂದು ಸೇರಿಸಿಕೊಂಡು ನೇಪಾಳ ಸಿದ್ಧಪಡಿಸಿರುವ ಹೊಸ ಭೂಪಟ ಮಸೂದೆಗೆ ಅಲ್ಲಿನ ಅಧ್ಟಕ್ಷರು ಗುರುವಾರ ಅಂಕಿತ ಹಾಕಿದ್ದಾರೆ.

ನಿನ್ನೆಯಷ್ಟೇ ನೇಪಾಳದ ಹೊಸ ರಾಜಕೀಯ ಭೂಪಟ ಮಸೂದೆಗೆ ನೇಪಾಳ ಸಂಸತ್ ಸರ್ವಾನುಮತದ ಅಂಗೀಕಾರ ನೀಡಿತ್ತು. ಇಂದು ನೇಪಾಳ ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿ ಅವರು ಸಂವಿಧಾನ ತಿದ್ದುಪಡಿ ಮಸೂದೆ ಸಹಿ ಹಾಕಿದ್ದಾರೆ ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

ಇನ್ನು ಮುಂದೆ ತಿದ್ದುಪಡಿಗೊಂಡ ಭೂಪಟವು ನೇಪಾಳದ ರಾಷ್ಟ್ರೀಯ ಲಾಂಛನದಲ್ಲಿ ಕಾಣಿಸಲಿದೆ. 

ಹೊಸ ನಕ್ಷೆಯ ಪ್ರಕಾರ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾಪಾನಿ ನೇಪಾಳಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಈ ಹೊಸ ತಿದ್ದುಪಡಿ ನಕ್ಷೆಗೆ ಸದನದ 57 ಸದಸ್ಯರೂ ಮಸೂದೆ ಪರವಾಗಿಯೇ ಮತ ಚಲಾಯಿಸಿದ್ದಾರೆ.

ನೇಪಾಳದ ಹೊಸ ಭೂಪಟಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೃತಕ ಗಡಿ ವಿಸ್ತರಣೆ ಸಮರ್ಥನೀಯವಲ್ಲ ಮತ್ತು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

SCROLL FOR NEXT