ಸಂಗ್ರಹ ಚಿತ್ರ 
ವಿದೇಶ

ನ್ಯೂಜೆರ್ಸಿ: ಮನೆಯಲ್ಲಿನ ಈಜುಕೊಳದಲ್ಲಿ ಮೂವರು ಭಾರತೀಯ ಮೂಲದ ಕುಟುಂಬ ಸದಸ್ಯರ ಶವ ಪತ್ತೆ 

ಇತ್ತೀಚಿಗೆ ಖರೀದಿಸಿದ್ದ ಮನೆ ಹಿಂಭಾಗದ ಈಜುಕೊಳದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಮೂವರು ಭಾರತೀಯ ಮೂಲದ ಕುಟುಂಬ ಸದಸ್ಯರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ  ನಡೆದಿದೆ. 

ನ್ಯೂಜೆರ್ಸಿ: ಇತ್ತೀಚಿಗೆ ಖರೀದಿಸಿದ್ದ ಮನೆ ಹಿಂಭಾಗದ ಈಜುಕೊಳದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಮೂವರು ಭಾರತೀಯ ಮೂಲದ ಕುಟುಂಬ ಸದಸ್ಯರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ  ನಡೆದಿದೆ. 

ಭರತ್ ಪಟೇಲ್ (62), ಅವರ 33 ವರ್ಷದ ಸೊಸೆ ನಿಶಾ ಪಟೇಲ್ ಮತ್ತು ಅವರ 8 ವರ್ಷದ ಮಗಳು ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಸೋಮವಾರ ಈಸ್ಟ್ ಬ್ರನ್ಸ್‌ವಿಕ್‌ನ ಮನೆಯಲ್ಲಿನ ಈಜುಕೊಳದಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭರತ್, ನಿಶಾ ಮತ್ತು ಅವರ ಮಗಳು ವಿದ್ಯುದಾಘಾತವಾಗಿ ಈಜುಕೊಳದಲ್ಲಿ ಬಿದ್ದರೆ ಎನ್ನುವುದು ತನಿಖೆ ಮಾಡಲಾಗಿದ್ದು ಹಾಗೇನೂ ಸಂಭವಿಸಿಲ್ಲ ಎನ್ನುವುದು ಗೊತ್ತಾಗಿದೆ. ಮೂವರು ಕುಟುಂಬ ಸದಸ್ಯರು ಹೇಗೆ ಮುಳುಗಿದರು ಎಂಬುದನ್ನು ಇನ್ನಷ್ಟೇ ಕಂಡುಕೊಳ್ಲಬೇಕಿದೆ. ಅವರೆಲ್ಲಾ ಈಜು ಬಲ್ಲವರಾಗಿದ್ದರೆ ಅಥವಾ ನೀರಿನ ಆಳಕ್ಕೆ ಇಳಿದಾಗ ಭಯಪಟ್ಟು ಮುಳುಗಿದ್ದರೆ ಎನ್ನುವುದು ಗೊತ್ತಾಗಿಲ್ಲ. 

ಸಾರ್ವಜನಿಕ ದಾಖಲೆಗಳ ಪ್ರಕಾರ, ಕುಟುಂಬವು ಏಪ್ರಿಲ್‌ನಲ್ಲಿ 451,000 ಡಾಲರ್‌ಗೆ ಈ ಮನೆಯನ್ನು ಖರೀದಿಸಿದೆ. ಸೋಮವಾರ ಹಿತ್ತಲಿನಿಂದ ಕಿರುಚಾಟ ಕೇಳಿದ್ದಾಗಿ ಪಕ್ಕದ ಮನೆಯವರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮೂವರನ್ನು ಬದುಕಿಸುವಂತೆ ನಿಶಾ ಅವರ ಅತ್ತೆ ಕೊಳದ ಮೇಲ್ದಂಡೆಯಲ್ಲಿ ನಿಂತು ಕಿರುಚಿದ್ದಿರಬೇಕು ಎಂದೂ ಅವರು ಅಂದಾಜಿಸಿದ್ದಾರೆ. ಇದು ಅಮೆರಿಕಾದಲ್ಲಿ ನೆಲೆಸಿದ ಭಾರತೀಯ ಸಮುದಾಯಕ್ಕೆ ಆಘಾತಕಾರಿ ದಿನ ಎಂದು ಪೋಲೀಸ್ ಮುಖ್ಯಸ್ಥ ಫ್ರಾಂಕ್ ಲ್ಯುನಾಕೋ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

'ನನ್ನ ಸ್ನೇಹಿತ ಮೋದಿ ಜೊತೆಗೆ ಉತ್ತಮ ಮಾತುಕತೆ ನಡೆಸಿದೆ': ಡೊನಾಲ್ಡ್ ಟ್ರಂಪ್-Video

‘ಇದು ಒಂಟೆ ಕನಸಿನಂತಿದೆ’..: ಟ್ರಂಪ್ ಶಾಂತಿ ಒಪ್ಪಂದ ಹೇಳಿಕೆಗೆ ಇರಾನ್ ವ್ಯಂಗ್ಯ

ಸಂಪುಟ ಸಭೆಯಲ್ಲೂ ಸದ್ದು ಮಾಡಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ವಿರುದ್ಧ ಕ್ರಮಕ್ಕೆ ಸಚಿವರೇ ಆಕ್ಷೇಪ !

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ, ಇದು ನಾನು ನಿಲ್ಲಿಸಿದ 10 ನೇ ಯುದ್ಧ- ಟ್ರಂಪ್

SCROLL FOR NEXT