ವಿದೇಶ

ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಪ್ರಮಾಣ ವಚನ ಸ್ವೀಕಾರ

Srinivasamurthy VN

ಕೌಲಾಲಂಪುರ: ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಇಂದು ಬೆಳಗ್ಗೆ 10.30ಕ್ಕೆ ಇಸ್ತಾನಾ ನೆಗರಾದಲ್ಲಿರುವ ನ್ಯಾಷನಲ್ ಪ್ಯಾಲೇಸ್‌ನಲ್ಲಿ ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಪ್ರಮಾಣ ವಚನ ಸ್ವೀಕರಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಹಿದ್ದೀನ್ ಯಾಸಿನ್ ಅವರು, ತಮಗೆ 114 ಸದಸ್ಯರ ಬೆಂಬಲವಿದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಹೇಳಿದರು.

ಇನ್ನು ರಾಜಕೀಯ ಅಸ್ಥಿರತೆಯಿಂದ ಕಂಗಲಾಗಿರುವ ಮಲೇಷ್ಯಾದಲ್ಲಿ ಮುಹಿದ್ದೀನ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ನೂತನ ಸರ್ಕಾರದ ವಿರುದ್ಧ ಹೋರಾಡುವುದಾಗಿ ಮಾಜಿ ಪ್ರಧಾನಿ ಮಹತೀರ್ ಹೇಳಿದ್ದಾರೆ.

ಮಹತೀರ್ ಮೊಹಮ್ಮದ್ ಅವರು ತಮ್ಮ ಉತ್ತರಾಧಿಕಾರಿತಾಗಿ ಅನ್ವರ್ ಇಬ್ರಾಹಿಂರನ್ನು ನೇಮಿಸಿ ಹೊಸ ಸರ್ಕಾರ ರಚಿಸಲು ಮುಂದಾಗಿದ್ದರು. ಆದರೆ, ಮೈತ್ರಿಕೂಟ ಇದಕ್ಕೆ ಅಡ್ಡಿಪಡಿಸಿತ್ತು. ಹೀಗಾಗಿ, ತಮ್ಮ ಸ್ಥಾನಕ್ಕೆ ಮಹತೀರ್ ರಾಜೀನಾಮೆ ಸಲ್ಲಿಸಿದ್ದಾರೆ. 222 ಸ್ಥಾನಗಳುಳ್ಳ ಸಂಸತ್ತಿನಲ್ಲಿ ಹೊಸ ಸರ್ಕಾರ ರಚನೆ ಮಾಡಲು ಕನಿಷ್ಠ 112 ಸ್ಥಾನಗಳು ಬೇಕಿವೆ. 1981 ರಿಂದ 2003 ರ ಅವಧಿಯಲ್ಲಿ ಮಹತೀರ್ ಪ್ರಧಾನಿಯಾಗಿದ್ದಾಗ ಅನ್ವರ್ ಅವರು ಉಪ ಪ್ರಧಾನಿಯಾಗಿದ್ದರು. ಆದರೆ, 1998ರಲ್ಲಿ ಅನ್ವರ್ ಅಮಾನತುಗೊಳಿಸಿ, ಜೈಲಿಗೆ ಕಳಿಸಲಾಗಿತ್ತು.

SCROLL FOR NEXT