ವಿದೇಶ

ವಿಧಾನಸಭೆಯ ಮೇಲೆ ಗುಂಡಿನ ದಾಳಿ: ಅಧ್ಯಕ್ಷೀಯ ಅಭ್ಯರ್ಥಿ ಅಬ್ದುಲ್ಲ ಬಚಾವ್, 27 ಸಾವು

Vishwanath S

ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ನ ವಿಧಾನಸಭೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದು, 29 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆತಂಕಗೊಂಡ ನಾಗರಿಕರನ್ನು ಚದುರಿಸುತ್ತಿದ್ದಾರೆ ಎಂದು ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

ಕಾಬೂಲ್ ದಾಳಿ: ಅಬ್ಬುಲ್ಲ ಅಬ್ದುಲ್ಲ ಬಚಾವ್
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ದಾಳಿಯಲ್ಲಿ ದೇಶದ ಹಿರಿಯ ರಾಜಕಾರಣಿ ಅಬ್ಬುಲ್ಲ ಪಾರಾಗಿದ್ದಾರೆ ಎಂದು ಅವರ ವಕ್ತಾರ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಾಗ ಅಫ್ಘಾನಿಸ್ತಾನದ ಮಾಜಿ ಮುಖ್ಯ ಕಾರ್ಯನಿರ್ವಾಹಕ ಉಪಸ್ಥಿತರಿದ್ದುದು ನಿಜ.  ಆದರೆ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಬ್ದುಲ್ಲ ಅವರ ವಕ್ತಾರ ಮುಜಿಬುರಹಮಾನ್ ರಹಿಮಿ ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಈ ಗುಂಡಿನ ದಾಳಿಯಲ್ಲಿ ಅಫ್ಘಾನಿಸ್ತಾನದ ಉನ್ನತ ಶಾಂತಿ ಸಮಿತಿಯ ಮುಖ್ಯಸ್ಥ ಕರೀಮ್ ಖಲೀಲ್ ಮೃತಪಟ್ಟಿರುವುದಾಗಿ ಅನಧಿಕೃತ ಮೂಲಗಳು ತಿಳಿಸಿವೆ.

SCROLL FOR NEXT