ವಿದೇಶ

ಜಾಗತಿಕ ನಾಯಕರನ್ನೂ ಬಿಟ್ಟಿಲ್ಲ ಮಹಾಮಾರಿ! ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೋನಾ ಸೋಂಕು ದೃಢ

Raghavendra Adiga

ಆತಂಕಕಾರಿಉ ಬೆಳವಣಿಗೆಯಲ್ಲ್ಲಿ ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಮಾರಕ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. . ಡೊನಾಲ್ಡ್ ಟ್ರಂಪ್ಭೇಟಿಯ ನಂತರ ಉನ್ನತಾಧಿಕಾರಿಯೊಬ್ಬರು ಕಾಯಿಲೆಗೆ ತುತ್ತಾದ ನಂತರ ಅವರು  ಕೊರೋನಾವೈರಸ್ ಪರೀಕ್ಷೆಗೆ ಒಳಗಾಗಿದ್ದರು ಎಂದು ಎಂದು ಅವರ ಮಗ ಗುರುವಾರ ಹೇಳಿದ್ದಾರೆ.

ಅಧ್ಯಕ್ಷ ಬೋಲ್ಸನಾರೊ ಅವರನ್ನು ಕರೋನವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ನಾವು ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಆದಾಗ್ಯೂ, ಅವರು ರೋಗದ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುತ್ತಿಲ್ಲ" ಎಂದು ಅಧ್ಯಕ್ಷರ ಮೂರನೇ ಮಗ ಮತ್ತು ಶಾಸಕರಾದ ಎಡ್ವರ್ಡೊ ಬೋಲ್ಸನಾರೊ ಈ ಹಿಂದೆ ಟ್ವಿಟರ್‌ನಲ್ಲಿ ಬರೆದಿದ್ದರು.  ಆದರೆ ಇದೀಗ ಬ್ರೆಜಿಲ್ ಅಧ್ಯಕ್ಷರಿಗೆ ಮಾರಕ ರೋಗ ತಗುಲಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ಬಹಿರಂಗಪಡಿಸಿದೆ.. 

ಈ ನಡುವೆ ಅಧ್ಯಕ್ಷರು ಗುರುವಾರ ಈಶಾನ್ಯ ಬ್ರೆಜಿಲ್‌ನ ಮೊಸ್ಸೊರೊ ನಗರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಸೋಂಕಿನ ಕಾರಣ ಪ್ರವಾಸ ರದ್ದಾಗಿದೆ. ಅಲ್ಲದೆ ಅವರ ಕಚೇರಿಯು ಅವರ ದೈನಂದಿನ ಕಾರ್ಯಸೂಚಿಯಲ್ಲಿ ಬೇರೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲ ಎಂದಿದೆ.

ಅಧ್ಯಕ್ಷ ಬೋಲ್ಸನಾರೊ ಈ ಹಿಂದೆ ಕೊರೋನಾವೈರಸ್ ಅಷ್ಟೇನೂ ಮಾರಕ ಕಾಯಿಲೆಯಲ್ಲ, ಅದರ ತೀವ್ರತೆಯನ್ನು "ಅತಿಯಾಗಿ ಬಿಂಬಿಸಲಾಗುತ್ತಿದೆ" ಎಂದು ಹೇಳಿಕೆ ನೀಡಿದ್ದರು. 

"ಕಳೆದ ವಾರಾಂತ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಪ್ರವಾಸದ ನಂತರ ಬೋಲ್ಸನಾರೊ ಅವರ ಮಾದ್ಯಮ ಸಂವಹನ ಮುಖ್ಯಸ್ಥ ಫ್ಯಾಬಿಯೊ ವಾಜ್ಗಾರ್ಟನ್  ಅವರಿಗೆ ವಿನಾಶಕಾರಿ ಕೋವಿಡ್ -19 ತಗುಲಿರುವುದು ದೃಢಪಟ್ಟಿತ್ತು. ಅಮೆರಿಕಾ ಭೇಟಿಯ ವೇಳೆ ಈ ಇಬ್ಬರೂ ರೂ ಯುಎಸ್ ಅಧ್ಯಕ್ಷರನ್ನು ಅವರ ಫ್ಲೋರಿಡಾ ರೆಸಾರ್ಟಿನಲ್ಲಿ ಭೇಟಿಯಾಗಿದ್ದು ಟ್ರಂಪ್‌ರೊಂದಿಗೆ ಅಕ್ಕಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದರು.

SCROLL FOR NEXT