ವಿದೇಶ

ಮಹಾಮಾರಿ ಕೊರೋನಾಗೆ ಅಮೆರಿಕಾದಲ್ಲಿ 41 ಮಂದಿ ಬಲಿ: ತುರ್ತುಪರಿಸ್ಥಿತಿ ಘೋಷಿಸಿದ ಟ್ರಂಪ್

Manjula VN

ವಾಷಿಂಗ್ಟನ್: ಮಹಾಮಾರಿ ಕೋರೋನಾ ವೈರಸ್ ಇಡೀ ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಿದ್ದು, ವೈರಸ್'ಗೆ ಈವರೆಹಗೂ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 41 ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಇದೊಂದು ರಾಷ್ಟ್ರೀಯ ತುರ್ತುಪರಿಸ್ಥಿತಿಂದು ಅಧಿಕೃತವಾಗಿ ಘೋಷಣೆ  ಮಾಡಿದ್ದಾರೆ. 

ನಾನು ಇತ್ತೀಚೆಗೆ ಕೊರೋನಾ ಸೋಂಕಿತರನ್ನು ಸಂಪರ್ಕಿಸಿದ್ದೆ. ಆ ಬಳಿಕ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಮುಂದೆ ಸೋಕು ಪತ್ತೆ ಪರೀಕ್ಷೆಗೆ ಒಳಪಡಬಹುದು ಎಂದು ತಿಳಿಸಿದ್ದಾರೆ. 

ಆದರೆ, ಈ ಬಗ್ಗೆ ವೈದ್ಯರು ನಕಾರ ವ್ಯಕ್ತಪಡಿಸಿದ್ದು, ಟ್ರಂಪ್ ಅವರು ಸೋಂಕು ಪತ್ತೆ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಏಕೆಂದರೆ ಸೋಂಕು ತಗುಲಿರುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಕೊರೋನಾ ಪರೀಕ್ಷೆ ಅಗತ್ಯವಿಲ್ಲ ಎಂದಿದ್ದಾರೆ. ಆದರೂ ಟ್ರಂಪ್ ಅವರು ಮುಂದೊಂದು ದಿನ ಪರೀಕ್ಷೆಗೆ ಒಳಪಡಬಹುದು ಎಂದು ಹೇಳಿದ್ದಾರೆ. 

ಬ್ರೆಜಿಲ್ ಉಪಾಧ್ಯಕ್ಷ ಮೈಕ್ ಪೆನ್ಸ್ ಕಳೆದ ವಾರ ಪರೀಕ್ಷೆ ಮಾಡಿಸಿಕೊಂಡಿದ್ದಾಗ ವೈರಸ್ ಇರುವುದು ದೃಢಪಟ್ಟಿತ್ತು. ಇದೇ ವೇಳೆ ಬ್ರೆಜಿಲ್ ಉಪಾಧ್ಯಕ್ಷಕರನ್ನು ಟ್ರಂಪ್ ಅವರು ಭೇಟಿ ಮಾಡಿದ್ದರು. 

SCROLL FOR NEXT