ವಿದೇಶ

ಕೋವಿಡ್-19: ದೈನಂದಿನ ವೇತನ ಪಡೆಯುವವರಿಗಾದ ನಷ್ಟಕ್ಕೆ ಯೋಗಿ ಸರ್ಕಾರದಿಂದ ಪರಿಹಾರ! 

Srinivas Rao BV

ಲಖನೌ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದ ಸರ್ಕಾರ ಲಾಕ್ ಡೌನ್ ಕ್ರಮ ಕೈಗೊಂಡಿದ್ದು, ಇದರ ನೇರ, ಪರೋಕ್ಷ ಪರಿಣಾಮ ದೈನಂದಿನ ವೇತನಕ್ಕಾಗಿ ದುಡಿಯುವ ವರ್ಗದವರ ಮೇಲೆ ಬೀರಿದೆ. 

ಲಾಕ್ ಡೌನ್ ನಿಂದ ಉಂಟಾಗುತ್ತಿರುವ ನಷ್ಟದಿಂದ ದಿನನಿತ್ಯದ ವೇತನಕ್ಕಾಗಿ ದುಡಿಯುವವರಿಗೆ ಹೆಚ್ಚಿನ ಹೊರೆಯಾಗದಂತೆ ಎಚ್ಚರ ವಹಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರ ಭಾಗವಾಗಿ ಹಣಕಾಸು ಸಚಿವರ ನೇತೃತ್ವದಲ್ಲಿ ಕೃಷಿ ಸಚಿವ, ಕಾರ್ಮಿಕ ಸಚಿವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. 

ಕೊರೋನಾ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿ, ಬಡವರು, ದೈನದಿಂದ ವೇತನಕ್ಕಾಗಿ ದುಡಿಯುವ ವರ್ಗಗಳ ಮೇಲೆ ಪರಿಣಾಮ ಬೀರದಂತೆ, ಆರ್ಥಿಕ ನೆರವು ನೀಡುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳನ್ನು ಈ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಉತ್ತರ ಪ್ರದೇಶ ಸಚಿವ ಶ್ರೀಕಾಂತ್ ಶರ್ಮ ಹೇಳಿದ್ದಾರೆ. 
 

SCROLL FOR NEXT