ಚೀನಾ 
ವಿದೇಶ

'ಕೊರೋನಾ ಹರಡಿದ್ದಕ್ಕೆ ಚೀನಾ ವಿರುದ್ಧ ಕಾನೂನು ಕ್ರಮ ಜರುಗಿಸಿ....'

'ಜಗತ್ತಿಗೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನ್ನು ಹರಡಲು ಬಿಟ್ಟ ಚೀನಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. 

ವಾಷಿಂಗ್ ಟನ್: 'ಜಗತ್ತಿಗೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನ್ನು ಹರಡಲು ಬಿಟ್ಟ ಚೀನಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. 

ಪ್ರಾರಂಭಿಕ ಹಂತದಲ್ಲಿ ಕೊರೋನಾ ವೈರಾಣುವಿನ ಬಗ್ಗೆ ಸರಿಯಾದ ಮಾಹಿತಿ ನೀಡದೇ ಹರಡಲು ಬಿಟ್ಟು, ಗೌಪ್ಯವಾಗಿಟ್ಟಿದ್ದಕ್ಕೆ ಚೀನಾ ವಿರುದ್ಧ ಹಾಗೂ ತಪ್ಪು ಮಾಹಿತಿ ನೀಡಿದ ಇರಾನ್, ರಷ್ಯಾ, ವಿರುದ್ಧ ಅಮೆರಿಕ ಸಚಿವ ಮೈಕ್ ಪೊಂಪಿಯೊ ಅಸಮಾಧಾನ ವ್ಯಕ್ತಪಡಿಸಿದ್ದು, ಅಮೆರಿಕ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೊರೋನಾ ಗೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡಿರುವ ಡೊನಾಲ್ಡ್ ಟ್ರಂಪ್ ಕೊರೋನಾ ವೈರಸ್ ನ್ನು ಚೀನಾ ವೈರಸ್ ಎಂದು ಹೇಳಿದ್ದರು. ಆ ವೈರಸ್ ಚೀನಾದಿಂದ ಬಂದಿದ್ದು, ಕೈ ಮೀರಿ ಹೋಗಿದೆ. ಕೆಲವು ಜನರಿಗೆ ಇದರಿಂದ ಬೇಸರವಾಗಿದೆ, ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಚೀನಾವನ್ನು ಪ್ರೀತಿಸುತ್ತಾರೆ. ಅಮೆರಿಕವನ್ನು ಗೌರವಿಸುತ್ತಾರೆ. ನಾನೂ ಚೀನಾವನ್ನು ಗೌರವಿಸುತ್ತೇನೆ, ಕ್ಸೀ ಜಿನ್ ಪಿಂಗ್ ಅವರನ್ನೂ ಗೌರವಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು. 

ಈ ಹೇಳಿಕೆ ಬೆನ್ನಲ್ಲೇ ಫಾಕ್ಸ್ ನ್ಯೂಸ್ ಕೊರೋನಾ ವೈರಸ್ ಸಂಬಂಧ ನಡೆಸಿದ ವಿಶ್ಲೇಷಣೆಯಲ್ಲಿ ಕೊರೋನಾ ಹರಡಿದ್ದಕ್ಕೆ ಚೀನಾ ಕಾನೂನಿಗೆ ಉತ್ತರದಾಯಿಯಾಗಬೇಕಾಗುತ್ತದೆ ಎಂದು ಹೇಳಲಾಗಿದೆ.

ಹೇಗೆ ಭಯೋತ್ಪಾದನೆಗೆ ಬೆಂಬಲಿಸುವುದಕ್ಕೆ ಕಾನೂನು ಕ್ರಮ ಜರುಗಿಸಬಹುದೋ ಹಾಗೆಯೇ  ವಿಶ್ವಾದ್ಯಂತ ಹರಡುವ ಸಾಮರ್ಥ್ಯ ಹೊಂದಿರುವ ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸಿ, ಮಾಹಿತಿ ಮುಚ್ಚಿಟ್ಟಿದ್ದಕ್ಕೆ ಚೀನಾ ಕಾನೂನುಬದ್ಧವಾಗಿ ಹೊಣೆಗಾರನಾಗುತ್ತದೆ ಎಂಬ ವಾದ ಮಂಡಿಸಬಹುದು ಎಂದು ಇಸ್ರೇಲ್ ಮೂಲದ ಅಟಾರ್ನಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ