ವಿದೇಶ

ಜಗತ್ತಿನಾದ್ಯಂತ ಕೊರೊನಾವೈರಸ್ ಗೆ 25,000 ಬಲಿ!, ಚೀನಾ ಮೀರಿಸಿದ ಅಮೆರಿಕಕ್ಕೆ ನಡುಕ ಶುರು!

Vishwanath S

ಮಾಸ್ಕೋ: ಮಹಾಮಾರಿ ಕೋರೋನಾ ವೈರಸ್ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ್ದು ಜಗತ್ತಿನಾದ್ಯಂತ 25 ಸಾವಿರ ಮಂದಿ ಬಲಿಯಾಗಿದ್ದಾರೆ.

ಸೋಂಕು ಉಲ್ಬಣವಾದಾಗಿನಿಂದ ಇಟಲಿ ಮತ್ತು ಸ್ಪೇನ್ ನಲ್ಲಿ ಮೃತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇನ್ನು ಇಟಲಿಯಲ್ಲಿ  8,200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸ್ಪೇನ್ ನಲ್ಲಿ 4,858 ಮಂದಿ ಮೃತಪಟ್ಟಿದ್ದಾರೆ. ಬಹುತೇಕ ಸಾವುಗಳು ಒಂದು ತಿಂಗಳಲ್ಲೇ ಸಂಭವಿಸಿವೆ.

ಇನ್ನು ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಚೀನಾವನ್ನೇ ಮೀರಿಸಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 86 ಸಾವಿರಕ್ಕೇರಿದೆ. ಚೀನಾದಲ್ಲಿ 81,340 ಮಂದಿ ಸೋಂಕಿಗೆ ಒಳಗಾಗಿದ್ದು ಈ ಪೈಕಿ 74,588 ಮಂದಿ ಗುಣಮುಖರಾಗಿದ್ದಾರೆ. 

ಆದರೆ ಅಮೆರಿಕದಲ್ಲಿ ಬರೀ 1,868 ಮಂದಿ ಗುಣಮುಖರಾಗಿದ್ದು 83 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT