ಸಾಂದರ್ಭಿಕ ಚಿತ್ರ 
ವಿದೇಶ

ಲಾಕ್ ಡೌನ್ ಮಧ್ಯೆ ಯುಎಇಯಿಂದ ತಾಯ್ನಾಡಿಗೆ ಮರಳಲು ಸುಮಾರು 32 ಸಾವಿರ ಭಾರತೀಯರ ಹೆಸರು ನೋಂದಣಿ!

ದೇಶದಲ್ಲಿ ವಲಸಿಗರ ಮರು ನೋಂದಣಿ ಅಭಿಯಾನವನ್ನು ಆರಂಭಿಸಿದ ಬಳಿಕ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ತಾಯ್ನಾಡಿಗೆ ಮರಳಲು ಯುಎಇಯಿಂದ ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಅಬು ದಾಬಿ: ದೇಶದಲ್ಲಿ ವಲಸಿಗರ ಮರು ನೋಂದಣಿ ಅಭಿಯಾನವನ್ನು ಆರಂಭಿಸಿದ ಬಳಿಕ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ತಾಯ್ನಾಡಿಗೆ ಮರಳಲು ಯುಎಇಯಿಂದ ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಗುರುವಾರ ಸಂಜೆ 5 ಗಂಟೆ ವೇಳೆಗೆ  ಸುಮಾರು 32 ಸಾವಿರಕ್ಕೂ ಹೆಚ್ಚಿನ ನೋಂದಣಿಯನ್ನು ಸ್ವೀಕರಿಸಲಾಗಿದೆ ಎಂದು ದುಬೈನಲ್ಲಿರುವ ಭಾರತೀಯ ರಾಯಬಾರಿ ವಿಫುಲ್  ಗಲ್ಫ್ ನ್ಯೂಸ್ ಗೆ ತಿಳಿಸಿದ್ದಾರೆ. 

ಹೆಸರು ನೋಂದಣಿಯನ್ನು ಸ್ವೀಕರಿಸುವುದಾಗಿ ಬುಧವಾರ ರಾತ್ರಿ ದುಬೈನಲ್ಲಿರುವ ಭಾರತೀಯ ರಾಯಬಾರಿ ಅಧಿಕಾರಿಗಳು ಘೋಷಣೆ ಮಾಡಿದ್ದರು.  ಹೆಸರು ನೋಂದಣಿ ಪ್ರಕ್ರಿಯೆ ಘೋಷಣೆ ಹೊರಬಿದ್ದ ನಿಮಿಷದೊಳಗೆ ತಾಂತ್ರಿಕ ದೋಷದಿಂದಾಗಿ ವೆಬ್ ಸೈಟ್ ನಲ್ಲಿನ ಟ್ವೀಟ್ ಡಿಲಿಟ್ ಆಗಿದೆ. ನಂತರ ಗುರುವಾರ ಬೆಳಗ್ಗೆ ಅದನ್ನು ಮರು ಪೋಸ್ಟ್ ಮಾಡಲಾಗಿದೆ. 

ಆದಾಗ್ಯೂ, ವಿಮಾನದಲ್ಲಿನ ಆಸನದ ಖಾತ್ರಿ ನೀಡದ ಕಾನ್ಸುಲ್ ಜನರಲ್, ಅತ್ಯಂತ ಅರ್ಹ ಜನರಿಗೆ ಮಾತ್ರ ವ್ಯವಸ್ಥೆ ಮಾಡಲಾಗುವುದು, ಭಾರತ ಸರ್ಕಾರ ಸೇವೆಗಳನ್ನು ಪುನರ್ ಆರಂಭಿಸಿದಾಗ ದುಬೈ ವಿಮಾನ ನಿಲ್ದಾಣದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗರ್ಭೀಣಿಯರು, ತುರ್ತು ವೈದ್ಯಕೀಯ ಸೌಲಭ್ಯ ಬೇಕಾಗಿರುವವರು, ವಯೋವೃದ್ಧರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!