ಟ್ರಂಪ್ ಟೀಕೆ ಬೆನ್ನಲ್ಲೇ ಮಹಾಮಾರಿ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಪ್ರಶಂಸಿಸಿದ ವಿಶ್ವ ಆರೋಗ್ಯ ಸಂಸ್ಥೆ!
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಚೀನಾದ ಪಿಆರ್ಏಜೆನ್ಸಿ(ಸಾರ್ವಜನಿಕ ಸಂಪರ್ಕ ಸಂಸ್ಥೆ) ಮಾದರಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಬೆನ್ನಲ್ಲೇ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಡಬ್ಲ್ಯೂಎಚ್ಒ ಪ್ರಶಂಸಿಸಿದೆ.
ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಚೀನಾದ ಪಿಆರ್ಏಜೆನ್ಸಿ(ಸಾರ್ವಜನಿಕ ಸಂಪರ್ಕ ಸಂಸ್ಥೆ) ಮಾದರಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಬೆನ್ನಲ್ಲೇ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಡಬ್ಲ್ಯೂಎಚ್ಒ ಪ್ರಶಂಸಿಸಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಚೀನಾವನ್ನು ಶ್ಲಾಘಿಸಿದೆ ಮತ್ತು ಸೋಂಕಿನ ಕೇಂದ್ರಬಿಂದುವಾಗಿದ್ದ ವುಹಾನ್ ಅನ್ನು ಸಹಜ ಸ್ಥಿತಿಗೆ ತರುತ್ತಿರುವ ಚೀನಾವನ್ನು ನೋಡಿ ಇತರ ದೇಶಗಳು ಕಲಿಯಬೇಕಾಗಿದೆ ಎಂದು ಹೇಳಿದೆ.
ಕೊರೋನಾನವೈರಸ್ನಲ್ಲಿ ಡಬ್ಲ್ಯುಎಚ್ಒ ಪಾತ್ರದ ಬಗ್ಗೆ ಟ್ರಂಪ್ ಸರ್ಕಾರ ತನಿಖೆ ಆರಂಭಿಸಿದ್ದು, ಡಬ್ಲ್ಯೂಎಚ್ಒಗೆ ಅಮೆರಿಕದ ಆರ್ಥಿಕ ಸಹಾಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
66,000 ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ 2,40,000 ಜನರನ್ನು ಬಲಿ ತೆಗೆದುಕೊಂಡಿರುವ ಮತ್ತು 3.4 ಮಿಲಿಯನ್ ಜನರಿಗೆ ಸೋಂಕು ತಗುಲಿದ ಕೊರೋನಾವೈರಸ್ ಹರಡುವಿಕೆಗೆ ಜರ್ಮನಿ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಚೀನಾವನ್ನು ದೂಷಿಸುತ್ತಿವೆ.
ಜಿನೀವಾದಲ್ಲಿ ನಡೆದ ವರ್ಚುವಲ್ ಪ್ರೆಸ್ ಬ್ರೀಫಿಂಗ್ನಲ್ಲಿ WHO ನ ಆರೋಗ್ಯ ತುರ್ತು ಕಾರ್ಯಕ್ರಮದಲ್ಲಿ ಮಾರಿಯಾ ವ್ಯಾನ್ ಕೆರ್ಖೋವ್ ಅವರು, ವುಹಾನ್ನಲ್ಲಿ ಶೂನ್ಯ COVID-19 ಪ್ರಕರಣಗಳಿವೆ ಎಂದು ಗಮನಿಸಿದ್ದೇವೆ. ಅಲ್ಲಿ ಹೆಚ್ಚು ತೀವ್ರವಾದ ಪ್ರಕರಣಗಳಿಲ್ಲ ಎಂದು ಕೇಳಲು ಇದು ತುಂಬಾ ಸ್ವಾಗತಾರ್ಹ ಸುದ್ದಿ , ವುಹಾನ್ನಲ್ಲಿ ಹೆಚ್ಚಿನ ರೋಗಿಗಳಿಲ್ಲ. ಆದ್ದರಿಂದ ಈ ಸಾಧನೆಗೆ ಅಭಿನಂದನೆಗಳು ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.