ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಜೈಲಿಗಟ್ಟಿದ ಸಿಂಗಪೂರ್ ಕೋರ್ಟ್
ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಸಿಂಗಪೂರ್ ಕೋರ್ಟ್ 7 ತಿಂಗಳ ಕಾಲ ಜೈಲಿಗೆ ಕಳಿಸಿದೆ.
ಸಿಂಗಪೂರ್: ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಸಿಂಗಪೂರ್ ಕೋರ್ಟ್ 7 ತಿಂಗಳ ಕಾಲ ಜೈಲಿಗೆ ಕಳಿಸಿದೆ.
ರವಿ ಸಿನ್ನತಂಬಿ ಸುಬ್ರಹ್ಮಣಿಯಮ್ ಸಮಾಜಕ್ಕೆ ಅಪಾಯವಾಗಿದ್ದು ಹಲವಾರು ಅಪರಾಧಗಳಲ್ಲಿ ತೊಡಗಿದ್ದು, ಎರಡು ಪ್ರಕರಣಗಳಲ್ಲಿ ಆರೋಗ್ಯಾಧಿಕಾರಿಗಳು, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಹಾಗೂ ಮೂರನೇ ಪ್ರಕರಣದಲ್ಲಿ ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಯ ವಿರುದ್ಧ ಇನ್ನೂ 5 ಗುರುತರ ಪ್ರಕರಣಗಳು ದಾಖಲಾಗಿದೆ.
ಮತ್ತೊಂದು ಪ್ರಕರಣಗಳಲ್ಲಿ ರವಿ ಸಿನ್ನತಂಬಿ ಸುಬ್ರಹ್ಮಣಿಯಮ್ ಸರತಿ ಸಾಲಿನಲ್ಲಿ ನಿಂತಿದ್ದಾಗ ಮದ್ಯ ಸೇವನೆ ಮಾಡಿ ಸರತಿ ಸಾಲಿನ ಬಗ್ಗೆ ಆರೋಪ ಮಾಡಿದ್ದ. ಈ ಬಗ್ಗೆ ಪ್ರಶ್ನಿಸಿದ್ದ ಪೊಲೀಸರನ್ನೇ ನಿಂದಿಸಿದ ಪರಿಣಾಮ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.