ಸಾಂದರ್ಭಿಕ ಚಿತ್ರ 
ವಿದೇಶ

ಮಗನಿಂದ ಸಮಾಧಿಯಾದ ತಾಯಿ ಮೂರು ದಿನಗಳ ನಂತರ ಬದುಕಿ ಬಂದಾಗ!

ನಿಷ್ಕರುಣಿ ಮಗನೊಬ್ಬ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿರುವಾಗಿಯೇ ಸಮಾಧಿ ಮಾಡಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಮೂರು ದಿನಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ತಾಯಿ ಕೊಳೆತ ವಸ್ತ್ರದೊಂದಿಗೆ ಜೀವಂತವಾಗಿ ಪತ್ತೆಯಾಗಿದ್ದು,  ಹೀನಕೃತ್ಯ ವೆಸಗಿದ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಯತ್ನ ದೂರು ದಾಖಲಿಸಿದ್ದಾರೆ.

ಬೀಜಿಂಗ್: ನಿಷ್ಕರುಣಿ ಮಗನೊಬ್ಬ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿರುವಾಗಿಯೇ ಸಮಾಧಿ ಮಾಡಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಮೂರು ದಿನಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ತಾಯಿ ಕೊಳೆತ ವಸ್ತ್ರದೊಂದಿಗೆ ಜೀವಂತವಾಗಿ ಪತ್ತೆಯಾಗಿದ್ದು,  ಹೀನಕೃತ್ಯ ವೆಸಗಿದ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಯತ್ನ ದೂರು ದಾಖಲಿಸಿದ್ದಾರೆ.

ಮೇ 2 ರಂದು ಪತಿ ತನ್ನ ತಾಯಿಯನ್ನು ಒಂದು ರೀತಿಯ ಚಕ್ರದ ಕೈಬಂಡಿಯಲ್ಲಿ ಕರೆದೊಯ್ದಿದ್ದಾನೆ ಎಂದು ವ್ಯಕ್ತಿಯ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

ಮೂರು ದಿನಗಳ ಬಳಿಕ  ಮಹಿಳೆ ಹಿಂತಿರುಗಿ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶಾಂಕ್ಸಿ ಪ್ರಾಂತ್ಯದ ಜಿಂಗ್ ಬೈಯನ್ ಕೌಂಟಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

ಸಮಾಧಿಯಿಂದ ಹೊರಗೆ ಎತ್ತುವಂತೆ ಸಹಾಯಕ್ಕಾಗಿ ವೃದ್ಧ ಮಹಿಳೆ ಮೆಲು ಧ್ವನಿಯಲ್ಲಿ ಕೂಗುತ್ತಿದ್ದರು. ತದನಂತರ ಆಕೆಯನ್ನು ರಕ್ಷಣೆ ಮಾಡಲಾಯಿತು ಎಂದು ರಕ್ಷಣೆ ಮಾಡಿದ್ದವರು ತಿಳಿಸಿರುವುದಾಗಿ ಸ್ಟೇಟ್ ಮೀಡಿಯಾ ಶುಕ್ರವಾರ ವರದಿ ಮಾಡಿದೆ.ಪಾಪಿ ಮಗನನ್ನು 58 ವರ್ಷದ ಯನ್ ಮತ್ತು ಆತನ ತಾಯಿ 79 ವರ್ಷದ ವಾಂಗ್ ಎಂದು ಉಪನಾಮಗಳಿಂದ ಗುರುತಿಸಲಾಗಿದೆ.

ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ತಾಯಿಯನ್ನು ನಿರಂತರವಾಗಿ ಆರೈಕೆ ಮಾಡುತ್ತಿದ್ದರಿಂದ  ಮಗ ಬೇಸರಗೊಂಡಿದ್ದ ಎಂದು ಚೀನಾ ಡೈಲಿ ವರದಿ ಮಾಡಿದೆ.ವಿಚಾರಣೆ ಮುಂದುವರೆದಿದೆ ಆದರೆ, ಹೆಚ್ಚಿನ ಮಾಹಿತಿ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಚೀನಾದ ಹೆಚ್ಚಿನ ಭಾಗಗಳಲ್ಲಿ ಸಾರ್ವಜನಿಕ ನೆರವಿನ ಕೊರತೆಯಿದೆ. ವಿಶೇಷವಾಗಿ ಬಡ ಗ್ರಾಮೀಣ ಪ್ರದೇಶಗಳು ಮತ್ತು ಕುಟುಂಬಗಳು ವಯಸ್ಸಾದವರ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಾಮಾನ್ಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT