ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಚೀನಾದಲ್ಲಿ ಕೊರೋನಾ ಮತ್ತೆ ವಕ್ಕರಿಸಿದೆಯೇ?: ಸತತ ಎರಡನೇ ದಿನ ಸೋಂಕಿತರ ಸಂಖ್ಯೆ ಎರಡಂಕೆಯಲ್ಲಿ

ಕೊರೋನಾ ಮೊದಲ ಸಲ ಕಾಣಿಸಿಕೊಂಡ ಚೀನಾ ದೇಶದಲ್ಲಿ ಮಂಗಳವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಕಳೆದೆರಡು ದಿನ ಎರಡಂಕಿ ಹೊಸ ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು ಸೋಂಕಿನ ಎರಡನೇ ಸುತ್ತಿನ ಅಲೆ ಎದ್ದಿರಬಹುದೇ ಎಂಬ ಭೀತಿ ಅಲ್ಲಿನ ಜನರನ್ನು ಕಾಡಿತ್ತು.

ಸಾಂದರ್ಭಿಕ ಚಿತ್ರ
Sumana Upadhyaya
Updated On : 12 May 2020, 6:15 pm

ಬೀಜಿಂಗ್ : ಕೊರೋನಾ ಮೊದಲ ಸಲ ಕಾಣಿಸಿಕೊಂಡ ಚೀನಾ ದೇಶದಲ್ಲಿ ಮಂಗಳವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಕಳೆದೆರಡು ದಿನ ಎರಡಂಕಿ ಹೊಸ ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು ಸೋಂಕಿನ ಎರಡನೇ ಸುತ್ತಿನ ಅಲೆ ಎದ್ದಿರಬಹುದೇ ಎಂಬ ಭೀತಿ ಅಲ್ಲಿನ ಜನರನ್ನು ಕಾಡಿತ್ತು.

ಸದ್ಯ ಪರಿಣಾಮಕಾರಿ ರೀತಿಯಲ್ಲಿ ವೈರಸ್ ನ್ನು ನಿಯಂತ್ರಣಕ್ಕೆ ತಂದಿರುವ ಚೀನಾದಲ್ಲಿ ಎರಡನೇ ಸುತ್ತಿನಲ್ಲಿ ಕೊರೋನಾ ಸೋಂಕು ವಕ್ಕರಿಸಿದರೆ ದೇಶದ ಆರ್ಥಿಕ ಪುನಶ್ಚೇತನಕ್ಕೆ ಅಡ್ಡಗಾಲು ಆಗಬಹುದು ಎಂದು ಅನಿಸಿದ್ದು ಸುಳ್ಳಲ್ಲ.

ನಿನ್ನೆ ಚೀನಾದಲ್ಲಿ 17 ಹೊಸ ಕೇಸುಗಳು ವರದಿಯಾಗಿದ್ದು 5 ಕೇಸುಗಳು ವುಹಾನ್ ನಲ್ಲಿಯೇ ವರದಿಯಾಗಿದೆ. 7 ಕೇಸುಗಳು ಹೊರಗಿನಿಂದ ಬಂದಿದ್ದು ಎಂದು ಅಲ್ಲಿನ ಆರೋಗ್ಯ ಪ್ರಾಧಿಕಾರ ವರದಿ ಮಾಡಿದೆ.

Advertisement

Advertisement

ಆದರೆ ಸತತ 27 ದಿನಗಳಿಂದ ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಚೀನಾ ದೇಶದ ಅಧಿಕೃತ ಮಾಹಿತಿ ಪ್ರಕಾರ 4,633 ಮಂದಿ ಮೃತಪಟ್ಟು ಒಟ್ಟು 82 ಸಾವಿರದ 919 ಸೋಂಕಿತರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments