ನವದೆಹಲಿ: ಜಗತ್ತಿನ 213ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಈ ವರೆಗೂ 3,16,658 ಎಂದು ತಿಳಿದುಬಂದಿದೆ.
ಕೋವಿಡ್–19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದ್ದು, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 4.71 ಮಿಲಿಯನ್ ಗೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಜಗತ್ತಿನಾದ್ಯಂತ 86,827 ಮಂದಿ ಸೋಂಕಿಗೆ ತುತ್ತಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 4.71 ಮಿಲಿಯನ್ ಗೆ ಏರಿಕಯಾಗಿದೆ.
ಇನ್ನು ಮಾರಕ ವೈರಸ್ ಗೆ ವಿಶ್ವದಾದ್ಯಂತ ಇದುವರೆಗೆ 3,16,658 ಜನರು ಮೃತಪಟ್ಟಿದ್ದು, ನಿನ್ನೆ ಒಂದೇ ದಿನ 4,936 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಶ್ವದ 213 ರಾಷ್ಟ್ರಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 48 ಲಕ್ಷ ದಾಟಿದೆ. ಸುಮಾರು 18.57 ಲಕ್ಷ ಜನರು ಗುಣಮುಖರಾಗಿದ್ದಾರೆ. ಉಳಿದಂತೆ 26 ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 15.27 ಲಕ್ಷ ದಾಟಿದ್ದು, ಮೃತಪಟ್ಟವರ ಸಂಖ್ಯೆ 90 ಸಾವಿರಕ್ಕೆ ಏರಿಕೆಯಾಗಿದೆ. 3.46 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ರಷ್ಯಾದಲ್ಲಿ ಇದುವರೆಗೆ 2.81 ಜನರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಅದರಲ್ಲಿ, 2,631 ಸೋಂಕಿತರು ಮೃತ ಪಟ್ಟಿದ್ದಾರೆ. ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ 2.77 ದಾಟಿದ್ದು 27 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಇಂಗ್ಲೆಂಡ್ ಹಾಗೂ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 2.4 ಲಕ್ಷಕ್ಕೆ ಏರಿಕೆಯಾಗಿದ್ದು, ಈ ದೇಶಗಳಲ್ಲಿ ಕ್ರಮವಾಗಿ 34 ಸಾವಿರ ಮತ್ತು 16 ಸಾವಿರ ಜನರು ಮೃತಪಟ್ಟಿದ್ದಾರೆ.
ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಈವರೆಗೆ 82,947 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ದೇಶದಲ್ಲಿ 4,633 ಜನರು ಸಾವನ್ನಪ್ಪಿದ್ದಾರೆ.