ವಿದೇಶ

ದಕ್ಷಿಣ ಫಿಲಿಪೈನ್ಸ್ ನಲ್ಲಿ ಸರ್ಕಾರಿ ಪಡೆಗಳಿಂದ 7 ಉಗ್ರರ ಹತ್ಯೆ

Srinivas Rao BV

ಮನಿಲಾ: ದಕ್ಷಿಣ ಫಿಲಿಪೈನ್ಸ್ ನ ಸುಲು ಪ್ರಾಂತ್ಯದ ದ್ವೀಪವೊಂದರ ಬಳಿ ಸರ್ಕಾರಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಅಬು ಸಯ್ಯಫ್ ಗುಂಪಿನ ಏಳು ಶಂಕಿತ ಉಗ್ರರು ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

ಸ್ಥಳೀಯ ಕಾಲವಮಾನ ಮುಂಜಾನೆ 2 ಗಂಟೆಗೆ ಸುಲುವಿನ ಪರಂಗ್ ಪಟ್ಟಣದ ಸುಲಾರೆ ದ್ವೀಪದ ಬಳಿ ವೇಗದ ದೋಣಿಯಲ್ಲಿ ಸಾಗುತ್ತಿದ್ದ ಭಯೋತ್ಪಾದಕರ ತಂಡವನ್ನು ಗಸ್ತು ತಿರುಗುತ್ತಿದ್ದ ಪಡೆಗಳು ಪಡೆಗಳು ತಡೆದಿವೆ ಎಂದು  ವೆಸ್ಟರ್ನ್ ಮಿಂಡಾನಾವೊ ಕಮಾಂಡ್‌ನ ಕಮಾಂಡರ್ ಕಾರ್ಲೆಟೊ ವಿನ್ಲುವಾನ್ ತಿಳಿಸಿದ್ದಾರೆ. 

ಮುಖ್ಯ ಭೂಭಾಗವಾ ಮಿಂಡಾನಾವೊ ಪ್ರದೇಶದಲ್ಲಿ ಅಪಹರಣ ಚಟುವಟಿಕೆ ನಡೆಸಲು ಭಯೋತ್ಪಾದಕ ಗುಂಪು ಯೋಜನೆ ರೂಪಿಸಿದ್ದರ ಬಗ್ಗೆ ಮಾಹಿತಿ ಪಡೆದ ನಂತರ ಸೈನಿಕರು ಈ ದಾಳಿಯನ್ನು ಆರಂಭಿಸಿದ್ದರು. ಗುಂಡಿನ ಚಕಮಕಿ 25 ನಿಮಿಷಗಳ ಕಾಲ ನಡೆದಿದೆ. ಎಲೈಟ್ ಸ್ಕೌಟ್ ರೇಂಜರ್ಸ್ ಮತ್ತು ವಿಶೇಷ ಪಡೆಗಳ ಸೈನಿಕರು ಭಯೋತ್ಪಾದಕರ ವಿರುದ್ಧದ ದಾಳಿಗೆ ಹೆಲಿಕಾಪ್ಟರ್ ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ. ನೌಕಾಪಡೆ ಮತ್ತು ವಾಯಪಡೆಗಳನ್ನು ಬಳಸಿಕೊಂಡು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

SCROLL FOR NEXT