ಡೊನಾಲ್ಡ್ ಟ್ರಂಪ್ 
ವಿದೇಶ

ಪ್ಯಾರಿಸ್ ಒಪ್ಪಂದದಿಂದ ಅಧಿಕೃತವಾಗಿ ಹೊರ ಬಂದ ಅಮೆರಿಕ

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಬುಧವಾರ ಪ್ರಕಟಗೊಳ್ಳುತ್ತಿವೆ. ಅಮೆರಿಕಾ ಪ್ಯಾರಿಸ್ ಒಪ್ಪಂದದಿಂದ ಇಂದು ಅಧಿಕೃತವಾಗಿ ಹೊರ ಬಂದಿದೆ.

ನ್ಯೂಯಾರ್ಕ್: ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಬುಧವಾರ ಪ್ರಕಟಗೊಳ್ಳುತ್ತಿವೆ. ಅಮೆರಿಕಾ ಪ್ಯಾರಿಸ್ ಒಪ್ಪಂದದಿಂದ ಇಂದು ಅಧಿಕೃತವಾಗಿ ಹೊರ ಬಂದಿದೆ.

ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ತೆಗೆದುಕೊಂಡ ಅತ್ಯಂತ ವಿವಾದಾತ್ಮಕ ನಿರ್ಧಾರಗಳ ಪೈಕಿ ಇದು ಒಂದು. ಈ ನಿರ್ಣಯವನ್ನು 2017 ರಲ್ಲಿ ತೆಗೆದುಕೊಳ್ಳಲಾಗಿತ್ತಾದರೂ ಅದು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಮತ್ತೆ ಅಮೆರಿಕಾ ಬಯಸಿದರೆ ಒಪ್ಪಂದದಲ್ಲಿ ಸೇರಬಹುದಾಗಿದೆ.

ಪ್ಯಾರಿಸ್ ಒಪ್ಪಂದಕ್ಕೆ 2015 ರಲ್ಲಿ ಸಹಿ ಹಾಕಲಾಗಿತ್ತು. ಹವಾಮಾನದಲ್ಲಿ ಉಂಟಾಗುವ ದೊಡ್ಡ ಬದಲಾವಣೆಗಳನ್ನು ನಿರ್ಬಂಧಿಸಿ ಪರಿಸರ ಮಾಲಿನ್ಯ ತಡೆಗಟ್ಟುವುದು ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಜಾಗತಿಕ ತಾಪಮಾನವನ್ನು 2 ಸೆಂಟಿಗ್ರೇಡ್‌ ಕಡಿಮೆ ಮಾಡುವುದು ಈ ಒಪ್ಪದಗ ಗುರಿಯಾಗಿದೆ. 

ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಒಪ್ಪಂದದಿಂದ ದೂರ ಸರಿಯಲು ನಿರ್ಧರಿಸಿದ್ದರು. 2017 ರಲ್ಲಿ ಈ ಸಂಬಂಧ ಘೋಷಣೆ ಹೊರಡಿಸಿದ್ದರು. ಆದರೆ, ಒಪ್ಪಂದದಲ್ಲಿನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅಮೆರಿಕಾ ಹೊರಬರಲು ಮೂರು ವರ್ಷ ತೆಗೆದುಕೊಂಡಿತು. ಭವಿಷ್ಯದಲ್ಲಿ, ಅಮೆರಿಕಾದಂತಹ ದೇಶಗಳು ಏಕ ಕಾಲದಲ್ಲಿ ಒಪ್ಪಂದದಿಂದ ದೂರ ಸರಿದರೆ ಕಷ್ಟವಾಗಬಹುದು ಎಂಬ ಕಾರಣದಿಂದ, ಒಪ್ಪಂದದಿಂದ ಯಾವುದೇ ದೇಶ ದೂರಸರಿಯಬೇಕಾದರೆ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟ ಸಮಯ ತೆಗೆದುಕೊಳ್ಳುವಂತೆ ನಿಯಮಗಳನ್ನು ರೂಪಿಸಲಾಗಿದೆ. 

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಪ್ರಕಟಗೊಳ್ಳುತ್ತಿರುವ ದಿನದಂದೇ ಅಮೆರಿಕಾ ಪ್ಯಾರೀಸ್ ಒಪ್ಪಂದದಿಂದ ಅಧಿಕೃತವಾಗಿ ಹೊರಬಿದ್ದಿರುವುದು ಕಾಕತಾಳೀಯವಂತೂ ಅಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?