ವಿದೇಶ

49 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ರಾಜಿನಾಮೆ ನೀಡಿದ ಭಾರತ ಮೂಲದ ಲಾರ್ಜ್ ಮೆಘನಾದ್ ದೇಸಾಯಿ

Srinivasamurthy VN

ಲಂಡನ್: ಭಾರತೀಯ ಮೂಲದ ಪೀರ್ ಲಾರ್ಡ್ ಮೇಘನಾದ್ ದೇಸಾಯಿ ಅವರು ಬರೊಬ್ಬರಿ 49 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಹೌದು,. ಭಾರತ ಮೂಲದ ಅರ್ಥಶಾಸ್ತ್ರಜ್ಞ, ಲೇಖಕ ಮತ್ತು ಪೀರ್ ಲಾರ್ಡ್ ಮೇಘನಾದ್ ದೇಸಾಯಿ ಬ್ರಿಟನ್ ವಿರೋಧ ಪಕ್ಷ ಲೇಬರ್ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರ್ಣಭೇದ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೀರ್ ಲಾರ್ಡ್ ಮೇಘನಾದ್ ದೇಸಾಯಿ,  ಯಹೂದಿ ಸಂಸದರನ್ನು ಬಹಿರಂಗವಾಗಿ ನಿಂದಿಸಲಾಗಿದೆ. ಮತ್ತು ಮಹಿಳಾ ಸದಸ್ಯರನ್ನು ಟ್ರೋಲ್ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'80 ವರ್ಷದ ಪೀರ್ ಲಾರ್ಡ್ ಮೇಘನಾದ್ ದೇಸಾಯಿ ಅವರು ಲೇಬರ್ ಪಕ್ಷದ ಅತ್ಯಂತ ಹಿರಿಯ ಸದಸ್ಯರಾಗಿದ್ದರು. ಕಳೆದ 49 ವರ್ಷಗಳಿಂದ ಲೇಬರ್ ಪಕ್ಷಕ್ಕಾಗಿ ದುಡಿದಿದ್ದರು. ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ ಅವರ "ಕಾನೂನುಬಾಹಿರ ಕೃತ್ಯಗಳು" ಕಂಡುಬಂದರೂ ಪಕ್ಷ  ಅವರ ಬೆನ್ನಿಗೆ ನಿಂತದ್ದನ್ನು ಟೀಕಿಸಿ, ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೇಸಾಯಿ, ಒಂದೇ ಒಂದು ಕ್ಷಮೆ ಕೂಡ ಕೇಳದ ಆತನನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಪಕ್ಷದ ವಿಲಕ್ಷಣ ನಿರ್ಧಾರವಾಗಿದೆ. ಕೆಲವು ತಿಂಗಳುಗಳ ಹಿಂದೆ ಅವರು ಹೌಸ್ ಆಫ್ ಕಾಮರ್ಸ್ ನಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದರು. ಇದು ಪಕ್ಷದಲ್ಲಿನ ದೊಡ್ಡ ಬಿಕ್ಕಟ್ಟಿಗೆ  ಕೂಡ ಕಾರಣವಾಗಿತ್ತು. ಇದಾಗ್ಯೂ ಅವರನ್ನು ಪಕ್ಷದಲ್ಲಿ ಮುಂದುವರೆಸಲಾಗುತ್ತಿದೆ. ಪಕ್ಷದಲ್ಲಿನ ಈ ನಿರ್ಧಾರಗಳು ನಿಜಕ್ಕೂ ನಾಚಿಗೇಡಿನದ್ದು, ಇಂತಹ ಪಕ್ಷದಲ್ಲಿ ಮುಂದುವರೆಯಲು ನನಗೆ ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ. 
 

SCROLL FOR NEXT