ವಿದೇಶ

ಹೆಚ್ಚು ಎತ್ತರದ ಪ್ರದೇಶದಲ್ಲಿ ಟ್ರಕ್ ಆಧಾರಿತ ರಾಕೆಟ್ ಚಾಲಿತ ಸಿಡಿಮದ್ದುಗಳ ಪರೀಕ್ಷಾರ್ಥ ಉಡಾವಣೆ ನಡೆಸಿದ ಚೀನಾ!

Sumana Upadhyaya

ಬೀಜಿಂಗ್: ಚೀನಾದ ಮಿಲಿಟರಿ ಇತ್ತೀಚೆಗೆ ಅತಿ ಎತ್ತರದಲ್ಲಿ ಟ್ರಕ್ ಆಧಾರಿತ ಬಹು ರಾಕೆಟ್ ಚಾಲಿತ ಸಿಡಿಮದ್ದುಗಳ ಉಡಾವಣೆಯೊಂದಿಗೆ ನೇರ ಫೈರ್ ಪರೀಕ್ಷಾ ತರಬೇತಿಯನ್ನು ನಡೆಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ)ಪಿಎಲ್ಎ)ಟಿಬೆಟ್ ಮಿಲಿಟರಿ ಕಮಾಂಡ್ ನ ಮಾರ್ಗದರ್ಶನದಲ್ಲಿ ಬ್ರಿಗೇಡ್, 4,300 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿರುವ ತರಬೇತಿ ಮೈದಾನದಲ್ಲಿ ಯುದ್ಧ ಸನ್ನಿವೇಶಗಳ ಅಡಿಯಲ್ಲಿ ಪರೀಕ್ಷಾ ಕಸರತ್ತನ್ನು ನಡೆಸಿದೆ ಎಂದು ಚೀನಾ ಸೇನೆಯ ಹೇಳಿಕೆಯನ್ನು ಅಲ್ಲಿನ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಶತ್ರುಗಳ ಮೇಲೆ ದೂರದಿಂದಲೇ ಅಡೆತಡೆಗಳನ್ನು ಸ್ಥಾಪಿಸಿ, ತಾಪಮಾನ ಮತ್ತು ಆಮ್ಲಜನಕ ಕಡಿಮೆ ಇರುವ ಇಡೀ ಪ್ರದೇಶದಲ್ಲಿ ಗಣಿಗಳನ್ನು ಇರಿಸುವ ಗುರಿಯನ್ನು ಸಾಧಿಸಿದೆ. ಯುದ್ಧದ ಸಮಯದಲ್ಲಿ ಕ್ಷಿಪ್ರ ಸ್ಥಳೀಯ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗೆ ಹೊಂದಿಕೊಳ್ಳಲಿದ್ದು ಮನುಷ್ಯ ಮಾಡುವ ಕೆಲಸಕ್ಕಿಂತ ಹೊಸ ಶಸ್ತ್ರಾಸ್ತ್ರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ವರದಿ ತಿಳಿಸಿದೆ.

ಚೀನಾದ ಸೇನೆಯ ಹೇಳಿಕೆಗೆ ಪೂರಕವಾಗಿ ಒಂದು ಟ್ರಕ್ 40 ರಾಕೆಟ್-ಉಡಾವಣಾ ಬ್ಯಾರೆಲ್‌ಗಳನ್ನು ಒಯ್ಯುತ್ತದೆ, ಮತ್ತು ರಾಕೆಟ್-ಚಾಲಿತ ಗಣಿಗಳನ್ನು ಮಲ್ಟಿಪಲ್ ರಾಕೆಟ್ ಉಡಾವಣೆ ವ್ಯವಸ್ಥೆಯಂತೆ ಕಡಿಮೆ ಅಂತರದಲ್ಲಿ ಹಾರಿಸಲಾಗುತ್ತದೆ.

ಭಾರತ-ಚೀನಾ ಸೇನೆಗಳು ಪೂರ್ವ ಲಡಾಕ್ ನಲ್ಲಿ ನಿಯೋಜನೆಗೊಂಡಿರುವ ಸಂದರ್ಭದಲ್ಲಿ ಗಡಿಯಲ್ಲಿ ಅಲರ್ಟ್ ಆಗಿರುವಂತೆ, ಯುದ್ಧದ ಸಿದ್ಧತೆ ಕಡೆಗೆ ಗಮನ ಹರಿಸುವಂತೆ ಸೇನೆಗೆ ಅಲ್ಲಿನ ಅಧ್ಯಕ್ಷ ಕ್ಸಿ-ಜಿನ್ ಪಿಂಗ್ ಆದೇಶ ನೀಡಿರುವ ಬೆನ್ನಲ್ಲೇ ಸೇನೆಯನ್ನು ಉನ್ನತ ದರ್ಜೆಗೇರಿಸಿರುವುದು ಗಮನಾರ್ಹವಾಗಿದೆ.

SCROLL FOR NEXT