ಅನಿಕಾ ಚೆಬ್ರೊಲು 
ವಿದೇಶ

ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ: ಭಾರತೀಯ ಮೂಲದ 14 ವರ್ಷದ ಅನಿಕಾಗೆ 25 ಸಾವಿರ ಡಾಲರ್ ಬಹುಮಾನ

ಮಹಾಮಾರಿ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ಶ್ರಮಿಸುತ್ತಿರುವಾಗ ಭಾರತೀಯ ಮೂಲದ 14 ವರ್ಷದ ಬಾಲಕಿಯೊಬ್ಬರು ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಹೌಸ್ಟನ್: ಮಹಾಮಾರಿ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ಶ್ರಮಿಸುತ್ತಿರುವಾಗ ಭಾರತೀಯ ಮೂಲದ 14 ವರ್ಷದ ಬಾಲಕಿಯೊಬ್ಬರು ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಅಮೆರಿಕದ ಟೆಕ್ಸಾಸ್ ನ ಫ್ರಿಸ್ಕೋನಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿ ಅನಿಕಾ ಚೆಬ್ರೊಲು ಅವರು ಕೋವಿಡ್-19 ಸಂಭಾವ್ಯ ಚಿಕಿತ್ಸೆ ಒದಗಿಸುವ ಸಂಶೋಧನೆಗಾಗಿ 25,000 ಡಾಲರ್ ಬಹುಮಾನ ಹಾಗೂ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆದ್ದಿದ್ದಾರೆ.

3 ಎಂ ಚಾಲೆಂಜ್ ವೆಬ್‌ಸೈಟ್‌ನ ಪ್ರಕಾರ, ಕೊರೋನವೈರಸ್ ಸಾಂಕ್ರಾಮಿಕಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಕಳೆದ ಎರಡು ದಿನಗಳಿಂದ ನನ್ನ ಯೋಜನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅದು ಸಾರ್ಸ್ - ಕೋವಿಡ್-2 ವೈರಸ್ ಗೆ ಸಂಬಂಧಿಸಿದ್ದಾಗಿದ್ದು, ಇದು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಮ್ಮ ಸಾಮೂಹಿಕಿ ಭರವಸೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅನಿಕಾ ಸಿಎನ್ಎನ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಮಾನ್ಯ ಜನತೆಗೆ ಬರೆ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಬಸ್ ದರ ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿ ಜಾರಿ

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: 'Mr. ಪ್ರಧಾನಿ ಮೋದಿ ಎಚ್ಚರ.. ಭಾರತದಲ್ಲೂ ಇದೇ ಮರುಕಳಿಸುತ್ತೆ': ಕಾಂಗ್ರೆಸ್ ನಾಯಕಿ Shama Mohamed

ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಭಾರಿ ಅಗ್ನಿ ಅವಘಡ, ದೇವರ ದೀಪದಿಂದ ಹೊತ್ತಿದ ಬೆಂಕಿ, Video Viral

'ಹಜ್ ಯಾತ್ರೆ ಬಳಿಕ ಸಂಪೂರ್ಣ ಬದಲಾದಳು': ಪತ್ನಿ Farah Naaz ಜೊತೆಗಿನ ವಿಚ್ಚೇದನದ ಕುರಿತು ಕೊನೆಗೂ ಮೌನ ಮುರಿದ ನಟ Vindu Dara Singh!

India vs New Zealand, 1st ODI: ಮತ್ತೊಂದು ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!