ಅಮೆರಿಕದ ಸುರಕ್ಷತೆಗೆ ರಷ್ಯಾ ‘ದೊಡ್ಡ ಬೆದರಿಕೆ’: ಬಿಡೆನ್
ಅಮೆರಿಕದ ಸುರಕ್ಷತೆಗೆ ರಷ್ಯಾ ಅತಿದೊಡ್ಡ ಭದ್ರತಾ ಬೆದರಿಕೆಯಾಗಿದೆ ಎಂದು ತಾವು ಭಾವಿಸಿರುವುದಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಹೇಳಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಸುರಕ್ಷತೆಗೆ ರಷ್ಯಾ ಅತಿದೊಡ್ಡ ಭದ್ರತಾ ಬೆದರಿಕೆಯಾಗಿದೆ ಎಂದು ತಾವು ಭಾವಿಸಿರುವುದಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಹೇಳಿದ್ದಾರೆ.
‘ನಮ್ಮ ಭದ್ರತೆ ಮತ್ತು ನಮ್ಮ ಮೈತ್ರಿಗಳನ್ನು ಒಡೆಯುವಲ್ಲಿ ಇದೀಗ ಅಮೆರಿಕಕ್ಕೆ ದೊಡ್ಡ ಬೆದರಿಕೆ ಇದೆ ಎಂದು ಭಾವಿಸುತ್ತೇನೆ. ಎರಡನೆಯದಾಗಿ, ಅತಿದೊಡ್ಡ ಪ್ರತಿಸ್ಪರ್ಧಿ ಚೀನಾ ಎಂದು ಭಾವಿಸುತ್ತೇನೆ. ನಾವು ಇದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಆಧಾರದ ಮೇಲೆ ಸ್ಫರ್ಧೆ ನಿಂತಿದೆ.’ ಎಂದು ಸಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಬಿಡನ್ ಹೇಳಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೂಲಕ ಬಿಡೆನ್ ಆ ದೇಶದಿಂದ 3.5 ದಶಲಕ್ಷ ಡಾಲರ್ ಪಡೆದಿದ್ದಾರೆ ಎಂದು ಟ್ರಂಪ್ ಅಧ್ಯಕ್ಷೀಯ ಸಂವಾದ ಅಂತಿಮ ಸುತ್ತಿನ ಸಂದರ್ಭದಲ್ಲಿ ಆರೋಪಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.