ವಿದೇಶ

ಸೀಶೆಲ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ವೇವಲ್ ರಾಮ್‌ಕಲವಾನ್ ಗೆ ಗೆಲುವು!

Vishwanath S

ವಿಕ್ಟೋರಿಯಾ: ಭಾರತದ ಬಿಹಾರ ಮೂಲದ ಅರ್ಚಕ ವೇವೆಲ್ ರಾಮ್‌ಕಲವಾನ್ ಅವರು ಸೀಶೆಲ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಹಾಲಿ ಡ್ಯಾನಿ ಫೌರ್ ಅವರನ್ನು ಸೋಲಿಸಿದ್ದಾರೆ.

ಹಿಂದೂ ಮಹಾಸಾಗರದ ದ್ವೀಪಸಮೂಹವು ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶವಾಗಿದ್ದು, ಅದು 1976 ರಲ್ಲಿ ಸ್ವತಂತ್ರವಾಯಿತು. 1977ರ ನಂತರ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳು ಇಲ್ಲಿ ಅಧಿಕಾರಕ್ಕೆ ಬಂದಿದೆ. 

ಅಧಿಕೃತ ಫಲಿತಾಂಶಗಳ ಪ್ರಕಾರ, ವೇವೆಲ್ ರಾಮಕಲವಾನ್ ಅವರು ಅಧ್ಯಕ್ಷ ಡ್ಯಾನಿ ಫೌರ್ ಅವರನ್ನು ಶೇಕಡಾ 54.9ರಷ್ಟು ಅಂತರದಿಂದ ಸೋಲಿಸಿದ್ದಾರೆ.

SCROLL FOR NEXT