ವಿದೇಶ

2021ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ನಾಮ ನಿರ್ದೇಶನ

Lingaraj Badiger

ವಾಷಿಂಗ್ಟನ್: ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಡುವೆ ಶಾಂತಿ ಸಂಧಾನ ಪ್ರಯತ್ನ ಸೇರಿದಂತೆ ಜಾಗತಿಕ ಸಂಘರ್ಷಗಳನ್ನು ತಡೆಗಟ್ಟಲು ನೀಡಿದ ಕೊಡುಗೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು 2021ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ಗಡಿ ವಿವಾದದಂತಹ ಇತರ ಸುದೀರ್ಘ ಸಂಘರ್ಷಗಳ ನಿವಾರಣೆಗೆ ಹೊಸ ದಿಕ್ಕು, ಚಿಂತನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ನಾರ್ವೆ ದೇಶದ ಸಂಸದ ಕ್ರಿಶ್ಚಿಯನ್ ಟೈಬ್ಲಿಂಗ್ ಜಿಡೆ ಅವರು ಡೊನಾಲ್ಡ್ ಟ್ರಂಪ್ ಹೆಸರು ನಾಮ ನಿರ್ದೇಶ ಮಾಡಿದ್ದಾರೆ ಎಂದು ವರದಿಯಾಗಿದೆ.

ಜಾಗತಿಕ ಸಂಘರ್ಷಗಳನ್ನು ತಡೆಯುವಲ್ಲಿ ಟ್ರಂಪ್‌ ಅವರ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ಜಿಡೆ ಎಂದು ಹೇಳಿದ್ದಾರೆ.

SCROLL FOR NEXT