ವಿದೇಶ

ಕೊರೋನಾ ನಿಗ್ರಹ, ಉತ್ತಮ ಕೆಲಸಕ್ಕೆ ಪ್ರಧಾನಿ ಮೋದಿ ಶಹಬಾಸ್: ಟ್ರಂಪ್ ಬಣ್ಣನೆ

Vishwanath S

ವಾಷಿಂಗ್ಟನ್: ಕೊರೋನಾ ಸೊಂಕು  ಪರೀಕ್ಷೆಯಲ್ಲಿ  ಯಾರು ಮಾಡಿರದ  ಅದ್ಭುತ ಕೆಲಸ ಮಾಡಿದ್ದೀರಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ  ಮನಸಾರೆ ಶ್ಲಾಘಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿಯೇ ಅವರ ಬೆನ್ನು ತಟ್ಟಿಕೊಂಡಿದ್ದಾರೆ. 

ಅಮೆರಿಕದಲ್ಲಿ ಹಿಂದಿನ ಸರ್ಕಾರ  ಎಚ್1ಎನ್1 ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು ಎನ್ನುವ ಮೂಲಕ ಡೆಮಾಕ್ರಟಿಕ್ ಪಕ್ಷದ ತಮ್ಮ ಎದುರಾಳಿ ಜೋ ಬಿಡೆನ್ ಅವರ ವಿರುದ್ಧದ ಟೀಕೆಯನ್ನು ಟ್ರಂಪ್ ಮುಂದುವರಿಸಿದ್ದಾರೆ.

ಭಾರತದಲ್ಲಿ ಮಾಡಿರುವುದಕ್ಕಿಂತಲೂ, ಅಮೆರಿಕದಲ್ಲಿ ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗಿದೆ ಪರೀಕ್ಷೆಯಲ್ಲಿ ಅಮೆರಿಕದ ಬಳಿಕ ಭಾರತ ಎರಡನೇಯ ಸ್ಥಾನದಲ್ಲಿದೆ ಎಂದರು.

ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 67 ಲಕ್ಷ ದಾಟಿದೆ. ಇನ್ನು 1.98 ಸಾವಿರ ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ಭಾರತದಲ್ಲಿ ಸೋಂಕಿತರ ಸಂಖ್ಯೆ 48 ಲಕ್ಷ ದಾಟಿದ್ದು 80 ಸಾವಿರ ಮಂದಿ ಬಲಿಯಾಗಿದ್ದಾರೆ. 

SCROLL FOR NEXT