ವಿದೇಶ

ಕಠ್ಮಂಡುವಿನಲ್ಲಿ ಚೀನಾ ವಿರುದ್ಧ ಭುಗಿಲೆದ್ದ ಪ್ರತಿಭಟನೆ 

Srinivas Rao BV

ಕಠ್ಮಂಡು: ನೇಪಾಳದಲ್ಲಿ ಚೀನಾದ ಅತಿಕ್ರಮಣವನ್ನು ವಿರೋಧಿಸಿ ಕಠ್ಮಂಡು ರಾಯಭಾರಿ ಕಚೇರಿ ಎದುರು ಪ್ರತಿಭಟನೆ ಭುಗಿಲೆದ್ದಿದೆ.

ನೇಪಾಳದ ಹಲವು ಭೂಭಾಗಗಳನ್ನು ಚೀನಾ ಆಕ್ರಮಿಸಿಕೊಂಡಿತ್ತು. ಇದನ್ನು ವಿರೋಧಿಸಿ ನೇಪಾಳದ ಯುವಕರು ಪ್ರತಿಭಟನೆ ನಡೆಸಿದ್ದಾರೆ.

ಚೀನಾ ವಿರುದ್ಧ ಪ್ರತಿಭಟನೆ ನಡೆಸಿರುವ ನೇಪಾಳ ಯುವಕರು ತಕ್ಷಣವೇ ಅತಿಕ್ರಮಣ ಮಾಡಿರುವ ಪ್ರದೇಶದಿಂದ ಹೊರನಡೆದು ದ್ವಿಪಕ್ಷೀಯ ಗಡಿ ಒಪ್ಪಂದವನ್ನು ಗೌರವಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ.

ಪ್ರತಿಭಟನಾ ನಿರತರನ್ನು ಪೊಲೀಸರು ಚದುರಿಸಿದ್ದಾರೆ. ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ ಚೀನಾ ಭದ್ರತಾಪಡೆಗಳು ಕಟ್ಟಡ ನಿರ್ಮಾಣಕಾಮಗಾರಿಗಳನ್ನು ನಡೆಸುತ್ತಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈ ಪ್ರದೇಶ ನೇಪಾಳ-ಚೀನಾ ಗಡಿಯಲ್ಲಿರುವ ಚೀನಾದ ವ್ಯಾಪ್ತಿಗೆ ಬರಲಿದೆ ಎನ್ನುತ್ತಿದೆ ಚೀನಾ.

SCROLL FOR NEXT