ವಿದೇಶ

ಕೊರೋನಾ ಹೆಚ್ಚಳ: ಭಾರತಕ್ಕೆ 50 ಆ್ಯಂಬುಲೆನ್ಸ್ ನೆರವು ನೀಡಲು ಪಾಕ್ ನ ಎಧಿ ಫೌಂಡೇಶನ್ ಮುಂದು!

Vishwanath S

ಇಸ್ಲಾಮಾಬಾದ್/ನವದೆಹಲಿ: ಭಾರತದಲ್ಲಿ ಕೊರೋನಾ ಎರಡನೇ ಅಲೆ ನರಕವನ್ನೇ ಸೃಷ್ಟಿಸುತ್ತಿದೆ. ಹೀಗಾಗಿ ನೆರಯ ರಾಷ್ಟ್ರ ಚೀನಾ ಅಗತ್ಯ ನೆರವು ನೀಡುವುದಾಗಿ ಹೇಳುತ್ತಿದ್ದು ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸಹಾಯಹಸ್ತ ಚಾಚುವುದಾಗಿ ಹೇಳಿದೆ. 

ಪಾಕಿಸ್ತಾನದ ಎಧಿ ಫೌಂಡೇಶನ್ ಭಾರತಕ್ಕೆ ನೆರವಾಗಲು 50 ಆ್ಯಂಬುಲೆನ್ಸ್ ಗಳನ್ನು ಕಳುಹಿಸಲು ಮುಂದಾಗಿದೆ. ಪ್ರಧಾನಿ ಮೋದಿಗೆ ಸಂಸ್ಧೆಯ ಸಂಸ್ಥಾಪಕ ದಿವಂಗತ ಅಬ್ದುಲ್ ಸತ್ತಾರ್ ಎಡಿಯವರ ಪುತ್ರ ಫೈಸಲ್ ಪತ್ರ ಬರೆದು ಈ ನೆರವನ್ನು ಪ್ರಸ್ತಾಪಿಸಿದ್ದಾರೆ. 

ಭಾರತದಲ್ಲಿ ಕೊರೋನಾ ಮಹಾಮಾರಿ ಭಾರೀ ಹೊಡೆತವನ್ನು ನೀಡುತ್ತಿದ್ದು ಈ ಬಗ್ಗೆ ತಿಳಿದು ತುಂಬಾ ಖೇಧವಿಸಿತು. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾದಿಂದ ಬಳಲುತ್ತಿದ್ದಾರೆ. ಹೀಗಾಗಿ ತಮ್ಮ ಕೈಲಾದ ಸಹಯ ಮಾಡುವುದಾಗಿ ಹೇಳಿದ್ದು 50 ಆ್ಯಂಬುಲೆನ್ಸ್ ಕಳುಹಿಸಲು ಮುಂದಾಗಿರುವುದು ತಿಳಿಸಿದ್ದಾರೆ. 

ಎಡಿ ಫೌಂಡೇಶನ್ ನ ಆ್ಯಂಬುಲೆನ್ಸ್ ಸೇವೆ ಪಾಕ್ ನ ಸರ್ಕಾರಿ ಸೇವೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇವುಗಳನ್ನು ಸರ್ಕಾರಿ ಆ್ಯಂಬುಲೆನ್ಸ್ ಗಿಂತ ಮೊದಲು ಅಪಘಾತ ಅಥವಾ ಭಯೋತ್ಪಾದಕ ದಾಳಿ ಸ್ಥಳವನ್ನು ತಲುಪುತ್ತವೆ. 

SCROLL FOR NEXT