ಮುಂಬೈಯಲ್ಲಿ ಕೋವಿಡ್ ಲಸಿಕೆಗೆ ಸಾಲುಗಟ್ಟಿ ನಿಂತ ಜನರು 
ವಿದೇಶ

ಭಾರತದ ರೂಪಾಂತರಿ ಕೊರೋನಾ ಕನಿಷ್ಠ 17 ದೇಶಗಳಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ 

ಕೋರೋನಾ ಸೋಂಕು ಹೆಚ್ಚಾಗಿ ಎರಡನೇ ಅಲೆ ವ್ಯಾಪಕವಾಗಿ ಹರಡಲು ಕಾರಣವಾಗಿರುವ ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೋನಾ ವೈರಸ್ 12ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ.

ಜಿನಿವಾ: ಕೋರೋನಾ ಸೋಂಕು ಹೆಚ್ಚಾಗಿ ಎರಡನೇ ಅಲೆ ವ್ಯಾಪಕವಾಗಿ ಹರಡಲು ಕಾರಣವಾಗಿರುವ ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೋನಾ ವೈರಸ್ 12ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ.

ಕೋವಿಡ್-19 ನ ಬಿ.1.617 ಕೊರೋನಾ ರೂಪಾಂತರಿ ಮೊದಲಿಗೆ ಭಾರತದಲ್ಲಿ ಪತ್ತೆಯಾದ ನಂತರ ನಿನ್ನೆಯ ಹೊತ್ತಿಗೆ ಕನಿಷ್ಠ 17 ದೇಶಗಳಲ್ಲಿ 1,200 ಕ್ಕೂ ಹೆಚ್ಚು ಅನುಕ್ರಮಗಳಲ್ಲಿ ಪತ್ತೆಯಾಗಿದೆ, ಇದು ಬೇರೆ ರೂಪಾಂತರಿ ಕೊರೋನಾಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ವೇಗವಾಗಿ ಹರಡುತ್ತಿದೆ. ಅವುಗಳಲ್ಲಿ ಅತಿ ಹೆಚ್ಚು ಭಾರತ, ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವರದಿಯಲ್ಲಿ ತಿಳಿಸಿದೆ.

ಕೊರೋನಾ ರೂಪಾಂತರಿ ಮೂಲ ಕೊರೋನಾ ವೈರಸ್ ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಅತಿ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ಲಸಿಕೆಯಿಂದ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ಪಡೆಯಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಭಾರತದಲ್ಲಿ ಕೊರೋನಾ ರೂಪಾಂತರಿ ಎಷ್ಟು ವೇಗವಾಗಿ ಹಬ್ಬುತ್ತಿದೆಯೆಂದರೆ ನಿನ್ನೆ ಒಂದೇ ದಿನ 3 ಲಕ್ಷದ 50 ಸಾವಿರ ಹೊಸ ಕೇಸುಗಳು ದಾಖಲಾಗಿವೆ. ವಿಶ್ವದಲ್ಲಿ ಸದ್ಯ 147.7 ಮಿಲಿಯನ್ ಕೇಸುಗಳಿವೆ. ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 3.1 ಮಿಲಿಯನ್ ಗಿಂತಲೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಬಿ.1.617 ಕೊರೋನಾ ರೂಪಾಂತರಿ ಮತ್ತು ಬೇರೆ ರೂಪಾಂತರಿ ಕೊರೋನಾ ಬಗ್ಗೆ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆಯಿದ್ದು, ಅವುಗಳು ಹೇಗೆ ಹಬ್ಬುತ್ತಿವೆ, ಅವುಗಳ ಹರಡುವಿಕೆಯ ಪರಿಣಾಮವೇನು, ತೀವ್ರತೆ, ಸೋಂಕಿನ ಅಪಾಯಗಳನ್ನು ತುರ್ತಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್