ಕಾಂಗ್ರೆಸ್ ಸದಸ್ಯ ರಾಜಾಕೃಷ್ಣಮೂರ್ತಿ 
ವಿದೇಶ

ಅಮೆರಿಕದಿಂದ ಭಾರತಕ್ಕೆ ಕೇವಲ 7.5 ಮಿಲಿಯನ್ ಡೋಸ್ ಕೋವಿಡ್ ಲಸಿಕೆ, ಇನ್ನೂ ಬೇಕು: ರಾಜ ಕೃಷ್ಣಮೂರ್ತಿ

ಅಮೆರಿಕ ತನ್ನ ಜಾಗತಿಕ ಲಸಿಕೆ ಸಹಾಯಹಸ್ತ ಯೋಜನೆಯಡಿಯಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಲಸಿಕೆಗಳನ್ನು ಪೂರೈಕೆ ಮಾಡಬೇಕೆಂದು ಅಲ್ಲಿನ ಕಾಂಗ್ರೆಸ್ ಸದಸ್ಯ ರಾಜ ಕೃಷ್ಣಮೂರ್ತಿ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ. 

ವಾಷಿಂಗ್ ಟನ್: ಅಮೆರಿಕ ತನ್ನ ಜಾಗತಿಕ ಲಸಿಕೆ ಸಹಾಯಹಸ್ತ ಯೋಜನೆಯಡಿಯಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಲಸಿಕೆಗಳನ್ನು ಪೂರೈಕೆ ಮಾಡಬೇಕೆಂದು ಅಲ್ಲಿನ  ಕಾಂಗ್ರೆಸ್ ಸದಸ್ಯ ರಾಜ ಕೃಷ್ಣಮೂರ್ತಿ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ. 

ಭಾರತಕ್ಕೆ ಅಮೆರಿಕದಿಂದ ಈವರೆಗೂ 7.5 ಮಿಲಿಯನ್ ಡೋಸ್ ಗಳ ಲಸಿಕೆಯಷ್ಟೇ ಸಿಕ್ಕಿರುವುದು.  ಲಸಿಕೆಗೂ ಜಗ್ಗದ ಕೊರೋನಾ ವೈರಾಣು ತಳಿಗಳು ಹರಡುತ್ತಿದ್ದು, ಲಸಿಕೆ ನೆರವಿನ ಸಂಖ್ಯೆಯನ್ನು ಹೆಚ್ಚಿಸಬೇಕಿದೆ ಎಂದು ರಾಜಾ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. 

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಪಾಲುದಾರಿಕೆಯನ್ನು ಮುಂದುವರೆಸಿ, ಲಸಿಕೆ ಸೇರಿದಂತೆ ಹಲವು ರೀತಿಯ ನೆರವು ನೀಡಲು ಸಿದ್ಧವಿರುವುದಾಗಿ ಶ್ವೇತ ಭವನ ಹೇಳಿದ ಬೆನ್ನಲ್ಲೇ ಡೆಮಾಕ್ರೆಟಿಕ್ ಪಕ್ಷದ ಸದಸ್ಯ ರಾಜಾ ಕೃಷ್ಣಮೂರ್ತಿ ಕಾಂಗ್ರೆಸ್ ನಲ್ಲಿ ಮಾತನಾಡಿರುವುದು ಮಹತ್ವ ಪಡೆದಿದೆ. 

ಅಮೆರಿಕದ ಜಾಗತಿಕ ಲಸಿಕೆ ನೆರವು ಯೋಜನೆಯನ್ನು ವಿಸ್ತರಿಸಿ ಭಾರತಕ್ಕೆ ಹಾಗೂ ಇತರ ರಾಷ್ಟ್ರಗಳಿಗೆ ನೆರವು ನೀಡುವುದಕ್ಕೆ ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ 116 ಸದಸ್ಯರ ಬೆಂಬಲ ಪಡೆದಿದ್ದಾರೆ. 

ಜಗತ್ತು ಲಸಿಕೆ ನಿರೋಧಕ ಕೊರೋನಾ ವೈರಾಣುವಿನ ಭೀತಿ, ಅಪಾಯಗಳನ್ನು ಎದುರಿಸುತ್ತಿದೆ. ಈ ನಡುವೆ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಜಾಗತಿಕ ಮಟ್ಟದಲ್ಲಿ ಹೋರಾಟಕ್ಕೆ ಇನ್ನೂ ಹೆಚ್ಚಿನ ನೆರವು ನೀಡಲು ಎನ್ಒವಿಐಡಿ (Nullifying Opportunities for Variants to Infect and Decimate) ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಬೈಡನ್ ಆಡಳಿತವನ್ನು ಆಗ್ರಹಿಸುವುದಾಗಿ ಕೃಷ್ಣಮೂರ್ತಿ ಹೇಳಿದ್ದಾರೆ. 

"ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳಿವೆ. ಅಮೆರಿಕ ಈ ಹಂತದಲ್ಲಿ ಬಿಲಿಯನ್ ಗಟ್ಟಲೆ ಲಸಿಕೆಗಳನ್ನು ಉತ್ಪಾದಿಸಿ, ನೀಡಲು  ಜಾಗತಿಕ ಪಾಲುದಾರಿಕೆಗೆ ಮುಂದಾಗಿ ಸಾಂಕ್ರಾಮಿಕದಿಂದ ಸ್ವಾತಂತ್ರ್ಯ ಘೋಷಿಸಿಕೊಳ್ಳುವಂತಾಗಬೇಕು" ಎಂದೂ ಕೃಷ್ಣಮೂರ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಹಿಳಾ ವಿಶ್ವಕಪ್ 2025: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 53 ರನ್‌ಗಳ ಭರ್ಜರಿ ಜಯ, ಸೆಮಿಫೈನಲ್‌ಗೆ INDIA ಲಗ್ಗೆ!

ವೆಸ್ಟ್ ಬ್ಯಾಂಕ್ ವಶಪಡಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೇ ಅಮೆರಿಕದ ಬೆಂಬಲ ಕಳಕೊಳ್ಳಬೇಕಾಗುತ್ತೆ: ಇಸ್ರೇಲ್‌ಗೆ ಟ್ರಂಪ್ ಕಟು ಎಚ್ಚರಿಕೆ

ರಕ್ಷಣಾ ವಲಯಕ್ಕೆ 79,000 ಕೋಟಿ ರೂ. ಮೌಲ್ಯದ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ!

ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆ ಆರಂಭ: ಯಾರಾಗಲಿದ್ದಾರೆ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ?

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಎರಡ್ಮೂರು ದಿನಗಳಲ್ಲಿ AAI ವರದಿ ಸಲ್ಲಿಕೆ- ಎಂ.ಬಿ ಪಾಟೀಲ್

SCROLL FOR NEXT