ವಿದೇಶ

ಪ್ರಪಂಚದ ಎತ್ತರದ ಕಟ್ಟಡದ ತುದಿಯಲ್ಲಿ ನಿಂತ ಯುವತಿ: ನಿಜವೋ ಸುಳ್ಳೋ?

ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ದುಬೈನ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಯುವತಿಯೋರ್ವಳು ನಿಂತಿರುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ದುಬೈ: ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ದುಬೈನ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಯುವತಿಯೋರ್ವಳು ನಿಂತಿರುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅನೇಕರು ಇದು ಗ್ರಾಫಿಕ್ಸ್ ಕೈಚಳಕ ಎಂದು ತಮ್ಮ ಬುದ್ಧಿಮತ್ತೆ ಪ್ರದರ್ಶಿಸಿದರೆ, ಇನ್ನು ಕೆಲವರು ಆ ಯುವತಿಯ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಲಕ್ಷಾಂತರ ಮಂದಿಯ ಗಮನವನ್ನು ಈ ವಿಡಿಯೋ ಸೆಳೆದಿರುವುದು ಸುಳ್ಳಲ್ಲ. 

ವಿಡಿಯೋದಲ್ಲಿ ಮೊದಲಿಗೆ ಯುವತಿಯನ್ನು ಕ್ಲೋಸಪ್ ಶಾಟ್ ನಲ್ಲಿ ತೋರಿಸಲಾಗುತ್ತದೆ. ಹೀಗಾಗಿ ಯುವತಿ ಯಾವ ಸ್ಥಳದಲ್ಲಿ ನಿಂತಿದ್ದಾಳೆ ಎನ್ನುವುದು ವೀಕ್ಷಕರಿಗೆ ತಿಳಿಯುವುದಿಲ್ಲ. ಆಕೆ ಸಂದೇಶವನ್ನು ಬರೆಯಲಾದ ಫಲಕಗಳನ್ನು ಹಿಡಿದು ನಿಂತಿದ್ದಾಳೆ. ನಂತರ ನಿಧಾನವಾಗಿ ಕ್ಯಾಮೆರಾ ಹಿಂದಕ್ಕೆ ಸರಿಯುತ್ತಿದ್ದಂತೆಯೇ ಯುವತಿ ನಿಂತಿರುವುದು ನೆಲದ ಮೇಲಲ್ಲ ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ ಎನ್ನುವುದು ಕಂಡುಬರುತ್ತದೆ. 

ಮೊದಲಿಗೆ ಈ ವಿಡಿಯೋ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಸೂಕ್ತ. ಇದು ಯುಎಇ ಒಕ್ಕೂಟ ರಾಷ್ಟ್ರದ ವಿಮಾನ ಸಂಸ್ಥೆಯಾದ ಫ್ಲೈ ಎಮಿರೇಟ್ಸ್ ಜಾಹೀರಾತು. ಒಂದು ಜಾಹೀರಾತಿಗಾಗಿ ಇಷ್ಟೆಲ್ಲಾ ಸರ್ಕಸ್ ಮಾಡಿರುವ ಬಗ್ಗೆ ಏನೇ ಪರ ವಿರೋಧ ಮಾತುಗಳು ಕೇಳಿಬರುತ್ತಿದ್ದರೂ ವಿಡಿಯೋ ಹಿಟ್ ಆಗಿರುವುದಂತೂ ನಿಜ. 

ಅಸಲಿಗೆ ಈ ವಿಡಿಯೋ ಗ್ರಾಫಿಕ್ಸ್ ಕೈಚಳಕವಲ್ಲ. ವಿಡಿಯೋದಲ್ಲಿ ಯುವತಿಯನ್ನು ನಿಜಕ್ಕೂ ಬುರ್ಜ್ ಖಲೀಫಾ ಮೇಲೆ ನಿಲ್ಲಿಸಲಾಗಿದೆ. ಅಂದ ಹಾಗೆ ವಿಡಿಯೋದಲ್ಲಿ ಕಂಡುಬಂದಿರುವ ಯುವತಿ ಓರ್ವ ಸ್ಕೈ ಡೈವ್ ತರಬೇತುದಾರಳಾಗಿದ್ದಾಳೆ. 

ಈ ಜಾಹಿರಾತಿನಲ್ಲಿ ಅಭಿನಯಿಸಲು ಫ್ಲೈ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯ ಕೆಲ ಗಗನಸಖಿಯರೇ ಮುಂದೆ ಬಂದಿದ್ದರು. ಆದರೆ ಸುರಕ್ಷತಾ ದೃಷ್ಟಿಯಿಂದ ದೈಹಿಕವಾಗಿ ಫಿಟ್ ಆದ ಯುವತಿಯರಿಗಾಗಿ ಹುಡುಕಾಟ ನಡೆಸಲಾಗಿತ್ತು ಎನ್ನುವುದು ಅಚ್ಚರಿಯ ವಿಷಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್: ಇನ್ಮುಂದೆ ತಮ್ಮ ಹೆಸರಿನ ಮುಂದೆ 'Tr' ಬಳಸುವ ಅವಕಾಶ!