ಅಮೆರಿಕದ ರ್ಯಾಪರ್ ಎಮಿನೆಮ್ 
ವಿದೇಶ

ಅಮೆರಿಕದ ರ್ಯಾಪರ್ ಎಮಿನೆಮ್ ಮಾಜಿ ಪತ್ನಿ ಕಿಮ್ ಸ್ಕಾಟ್ ಆತ್ಮಹತ್ಯೆಗೆ ಯತ್ನ

ಅಮೆರಿಕದ ರ್ಯಾಪರ್ ಎಮಿನೆಮ್ ರ ಮಾಜಿ ಪತ್ನಿ ಕಿಮ್ ಸ್ಕಾಟ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಹೊಂದಿದ್ದಾರೆ.

ವಾಷಿಂಗ್ಟನ್: ಅಮೆರಿಕದ ರ್ಯಾಪರ್ ಎಮಿನೆಮ್ ರ ಮಾಜಿ ಪತ್ನಿ ಕಿಮ್ ಸ್ಕಾಟ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಹೊಂದಿದ್ದಾರೆ.

ಕಳೆದ ಜುಲೈ 30 ರಂದು ಮಿಚಿಗನ್‌ನಲ್ಲಿರುವ ಸ್ಕಾಟ್‌ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು ಕಾನೂನು ನಿರ್ದೇಶನಾಲಯ ತುರ್ತು ಪ್ರಕ್ರಿಯೆ ತಂಡಕ್ಕೆ ಕರೆ ಬಂದು ಸ್ಥಳಕ್ಕೆ ಬಂದು ನೋಡಿದಾಗ ಚಿಂತಾಜನಕ ಸ್ಥಿತಿಯಲ್ಲಿದ್ದರು.  ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತು ಅವರು ಬಂದಾಗ, ಆಕೆಯ ಪ್ರಮುಖ ಚಿಹ್ನೆಗಳನ್ನು ಪರಿಶೀಲಿಸುತ್ತಿದ್ದ ಸಿಬ್ಬಂದಿಯೊಂದಿಗೆ ಅವಳು ಜಗಳವಾಡಿದಳು ಮತ್ತು ಪೊಲೀಸರಿಂದ ನಿರ್ಬಂಧಿಸಲ್ಪಡಬೇಕು ಎಂದು ವರದಿಯಾಗಿದೆ.

ಸ್ಕಾಟ್ ಅವರ ಕಾಲುಗಳ ಮೇಲೆ ಸಣ್ಣ ಗಾಯಗಳಾಗಿದ್ದು ಚಾಕುವಿನಿಂದ ಇರಿದುಕೊಂಡಿದ್ದರು. ಸಾಕಷ್ಟು ಪ್ರಮಾಣದಲ್ಲಿ ರಕ್ತ ಚೆಲ್ಲಿತ್ತು ಎಂದು ವೈದ್ಯರು ಹೇಳುತ್ತಾರೆ. ವೈದ್ಯಕೀಯ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. 

ಸ್ಕಾಟ್ ಅವರ ತಾಯಿ ಕತ್ಲೀನ್ ಸ್ಲಕ್ ಅವರು ಜುಲೈ 23ರಂದು ಮೃತಪಟ್ಟ ಒಂದು ವಾರದ ಬಳಿಕ ಈ ಘಟನೆ ನಡೆದಿದೆ. ಸ್ಕಾಟ್ ಮತ್ತು ಎಮಿನೆಮ್ ಹೈಸ್ಕೂಲ್ ದಿನಗಳಿಂದಲೇ ಒಬ್ಬರಿಗೊಬ್ಬರು ಪ್ರೀತಿಸಿ 1999ರಲ್ಲಿ ವಿವಾಹವಾಗಿದ್ದರು. ನಂತರ ಹೊಂದಾಣಿಕೆಯಾಗದೆ 2001ರಲ್ಲಿ ವಿಚ್ಛೇದನ ಪಡೆದಿದ್ದರು.ನಂತರ 2006ರ ಜನವರಿ 14ರಂದು ಪುನರ್ ವಿವಾಹವಾದರೂ ಎಮಿನೆಮ್ ಅದೇ ವರ್ಷ ಏಪ್ರಿಲ್ 5ರಂದು ವಿಚ್ಛೇದನ ಕೋರಿದ್ದರು. ಅವರಿಗೆ 25 ವರ್ಷದ ಹೈಲಿ ಜಡೆ ಎಂಬ ಮಗಳಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಚೀನಾದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು: ಕಾರಲ್ಲಿ ಕರೆದೊಯ್ದು ಪಾರುಮಾಡಿದ ಪುಟಿನ್; ಢಾಕಾದಲ್ಲಿ US ಅಧಿಕಾರಿ ನಿಗೂಢ ಸಾವು ಬಿಚ್ಚಿಟ್ಟ ಸ್ಫೋಟಕ ರಹಸ್ಯ!

ನನ್ನ ಹೇಳಿಕೆಗೆ ನಾನೂ ಈಗಲೂ ಬದ್ಧ, ಆದ್ರೆ ಸಿದ್ದರಾಮಯ್ಯ 5 ವರ್ಷ ಸಿಎಂ: ಯತೀಂದ್ರ

Musharraf ನ್ನು ಲಕ್ಷಾಂತರ ಡಾಲರ್ ಎಸೆದು ಖರೀದಿಸಿದ್ದೆವು, ಪಾಕಿಸ್ತಾನ ಸಂಪೂರ್ಣ ಅಣ್ವಸ್ತ್ರ ನಿಯಂತ್ರಣವನ್ನು ಅಮೆರಿಕಾಗೆ ಒಪ್ಪಿಸಿತ್ತು : ಮಾಜಿ ಸಿಐಎ ಅಧಿಕಾರಿ

ಬೆಂಗಳೂರು ಟನಲ್ ವಿರುದ್ಧ ಪ್ರಕಾಶ್ ಬೆಳವಾಡಿ ಅರ್ಜಿ; ತೇಜಸ್ವಿ ಸೂರ್ಯ ವಾದ ಮಂಡನೆ

Cricket: ಟೀಂ ಇಂಡಿಯಾಗೆ ಗಾಯದ ಭೀತಿ, ಶ್ರೇಯಸ್ ಅಯ್ಯರ್ ಆಸ್ಪತ್ರೆಗೆ ದೌಡು.. 'ಸೂಪರ್ ಕ್ಯಾಚ್' ಬಳಿಕ ಆಗಿದ್ದೇನು?

SCROLL FOR NEXT