ವಿದೇಶ

ಭಾರೀ ಭೂಕಂಪಕ್ಕೆ ತತ್ತರಿಸಿದ ಹೈಟಿ; ಸಾವಿನ ಸಂಖ್ಯೆ 1,297ಕ್ಕೆ ಏರಿಕೆ, 5700 ಮಂದಿಗೆ ಗಾಯ

Manjula VN

ಪೋರ್ಟ್ ಒ ಪ್ರಿನ್ಸ್: ಹೈಟಿ ರಾಷ್ಟ್ರದಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬರೋಬ್ಬರಿ 1,297ಕ್ಕೆ ಏರಿಕೆಯಾಗಿದೆ. 

ರಿಕ್ಟರ್​ ಮಾಪನದಲ್ಲಿ 7.2 ತೀವ್ರತೆ ದಾಖಲಾಗಿದೆ. ಪ್ರಬಲವಾದ ಭೂಕಂಪದಿಂದಾಗಿ ಸುಮಾರು 5700 ಮಂದಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು, ಕಟ್ಟಡಗಳು ಉರುಳಿಬಿದ್ದಿವೆ. ಹಲವಾರು ಮಂದಿ ಕಾಣೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಹೈಟಿ ದೇಶದ ನಾಗರಿಕ ರಕ್ಷಣಾ ಏಜೆನ್ಸಿ ನೀಡಿದ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನದಲ್ಲಿ ಶನಿವಾರ ರಾತ್ರಿ ಈ ಪ್ರಬಲ ಭೂಕಂಪ ಸಂಭವಿಸಿದೆ. ಈಗಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲಾಗುತ್ತಿದೆ.

2010ರಲ್ಲಿ ಇದೇ ರೀತಿ ಭಯಾನಕ ಭೂಕಂಪ ಹೈಟಿ ದೇಶದಲ್ಲಿ ಸಂಭವಿಸಿತ್ತು. ಇನ್ನೂ ಆ ಅವಘಡದಿಂದ ಚೇತರಿಕೆ ಕಾಣುತ್ತಿರುವಾಗಲೇ ಮತ್ತೊಂದು ಭೀಕರ ಭೂಕಂಪ ಸಂಭವಿಸಿದೆ.

SCROLL FOR NEXT