ವಿದೇಶ

ರಕ್ತಪಾತ ತಪ್ಪಿಸಲು ಅಫ್ಘಾನಿಸ್ತಾನ ತೊರೆದೆ- ಅಶ್ರಫ್ ಘನಿ 

Nagaraja AB

ಕಾಬೂಲ್: ಅಫ್ಘಾನಿಸ್ತಾನದ ಅಧ್ಯಕ್ಷರ ಪ್ಯಾಲೇಸ್ ಗೆ ಉಗ್ರರು ಲಗ್ಗೆ ಹಾಕಿ ಕಾಬೂಲ್ ತಾಲಿಬಾನ್ ವಶಕ್ಕೆ ಒಳಪಟ್ಟರಿಂದ ರಕ್ತಪಾತವನ್ನು ತಡೆಯುವ ನಿಟ್ಟಿನಲ್ಲಿ ದೇಶ ತೊರೆದಿದ್ದಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಪಲಾಯನ ನಂತರ ಫೇಸ್ ಬುಕ್ ಫೋಸ್ಟ್ ವೊಂದರಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅಶ್ರಫ್ ಘನಿ, ಇಂದಿನಿಂದ ಅಫ್ಘಾನಿಸ್ತಾನದ ಜನರ ರಕ್ಷಣೆ, ಗೌರವ ಮತ್ತು ಸಂಪತ್ತಿನ ಹೊಣೆಯನ್ನು ತಾಲಿಬಾನ್ ಹೊರಲಿದೆ ಎಂದು ಹೇಳಿದ್ದಾರೆ. 

ರಕ್ತಪಾತ ತಡೆಯುವ ನಿಟ್ಟಿನಲ್ಲಿ ದೇಶ ತೊರೆಯುವುದು ಉತ್ತಮ ಎಂದು ಯೋಚಿಸಿದೆ, ತಾಲಿಬಾನ್‌ಗಳು ಖಡ್ಗ ಮತ್ತು ಬಂದೂಕುಗಳ ತೀರ್ಪನ್ನು ಗೆದ್ದಿದ್ದು, ಈಗ ಅವರು ದೇಶವಾಸಿಗಳ ಗೌರವ, ಸಂಪತ್ತು ಮತ್ತು ಸ್ವಾಭಿಮಾನವನ್ನು ರಕ್ಷಿಸುವ ಹೊಣೆ ಹೊತ್ತಿದ್ದಾರೆ. ಇತಿಹಾಸದಲ್ಲಿ ಎಂದಿಗೂ ಒಣ ಅಧಿಕಾರವನ್ನು ಬೇರೆ ಯಾರಿಗೂ ನ್ಯಾಯಸಮ್ಮತವಾಗಿ ನೀಡಿಲ್ಲ, ಅದನ್ನು ತಾಲಿಬಾನ್ ಗಳಿಗೆ ನೀಡುವುದಿಲ್ಲ ಎಂದು ಘನಿ ಹೇಳಿದ್ದಾರೆ.

 ಸಶಸ್ತ್ರ ತಾಲಿಬಾನ್ ಮತ್ತು ಕಳೆದ 20 ವರ್ಷಗಳಿಂದ ನನ್ನ ಜೀವನವನ್ನು ತ್ಯಜಿಸಿದ ದೇಶದ ಜನರನ್ನು ತೊರೆಯುವ ಸಂಗತಿ ಬಂದಾಗ ಕಠಿಣ ಆಯ್ಕೆ ಎದುರುಸಿದ್ದೇನೆ, ಒಂದು ವೇಳೆ ನಾನು ದೇಶ ತೊರೆಯದಿದ್ದರೆ, 6 ಮಿಲಿಯನ್ ಜನರಿರುವ ನಗರದಲ್ಲಿ ದೊಡ್ಡ ಮಾನವ ವಿನಾಶಕಾರಿ ಘಟನೆಗೆ ಕಾರಣವಾಗುತಿತ್ತು ಎಂದು ಅವರು ಬರೆದುಕೊಂಡಿದ್ದಾರೆ. 

ದೇಶ ತೊರೆಯದಿದ್ದರೆ ಅಸಂಖ್ಯಾತ ದೇಶಭಕ್ತರು ಹುತಾತ್ಮರಾಗುತ್ತಿದ್ದರು. ಕಾಬೂಲ್ ನಗರ ಹಾಳಾಗುತಿತ್ತು,  ಇದರ ಪರಿಣಾಮವಾಗಿ ಆರು ಮಿಲಿಯನ್ ನಷ್ಟು ಜನರಿರುವ ನಗರದಲ್ಲಿ ದೊಡ್ಡ ಮಾನವೀಯ ದುರಂತ ಸಂಭವಿಸುತಿತ್ತು ಎಂದು ಅವರು ಹೇಳಿದ್ದಾರೆ.

 ನ್ಯಾಯಯುತವಾಗಿ ಜನರ ಹೃದಯ ಗೆಲ್ಲಲು, ಎಲ್ಲಾ ಜನರು, ರಾಷ್ಟ್ರಗಳು, ವಿವಿಧ ವಲಯಗಳು, ಸಹೋದರಿಯರು ಮತ್ತು ಅಫ್ಘಾನಿಸ್ತಾನದ ಮಹಿಳೆಯರಿಗೆ ಭರವಸೆ ನೀಡುವುದು ತಾಲಿಬಾನ್ ಗೆ ಅಗತ್ಯವಾಗಿದೆ. ಸ್ಪಷ್ಟ ಯೋಜನೆಯೊಂದಿಗೆ ಅದನ್ನು ಮಾಡಿ, ಸಾರ್ವಜನಿಕರೊಂದಿಗೆ ಹಂಚಿಕೊಳ್ಳಿ, ಬೌದ್ದಿಕತೆ ಹಾಗೂ ಅಭಿವೃದ್ಧಿ ಯೋಜನೆಯೊಂದಿಗೆ ದೇಶ ಸೇವೆಯನ್ನು ನಾನು ಯಾವಾಗಲೂ ಮುಂದುವರೆಸುತ್ತೇನೆ ಎಂದು ಘನಿ ತಿಳಿಸಿದ್ದಾರೆ.

SCROLL FOR NEXT