ವಿದೇಶ

ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು: ತಜ್ಞರ ವರದಿ

Harshavardhan M

ಕಾಬೂಲ್: ಮೇ 2020 ಮತ್ತು ಎಪ್ರಿಲ್ 2021ರ ಅಫ್ಘಾನಿಸ್ತಾನದ ಬೆಳವಣಿಗೆಗಳ ಹಿಂದೆ ಅಲ್ ಖೈದಾ ಕೈವಾಡ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು ಇರುವುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸಲ್ಲಿಕೆಯಾಗಿರುವ ತಜ್ಞರ ವರದಿಯಲ್ಲಿ ಹೇಳಲಾಗಿದೆ. 

ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ. ಇವೆಲ್ಲದರಿಂದಾಗಿ ಅವರೆಡು ಸಂಘಟನೆಗಳ ನಡುವೆ ಬಿಡಿಸಲಾಗದ ನಂಟಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ತಾಲಿಬಾನ್ ಈ ಹಿಂದೆ ಅಮೆರಿಕ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಅಲ್ ಖೈದಾ ನಾಯಕರ ಸಲಹೆ ಪಡೆದುಕೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು ಇದು ಅಂತಾರಾಷ್ಟ್ರೀಯ ಸಮುದಾಯದ ನಾಯಕರ ನಿದ್ದೆಗೆಡಿಸಿದೆ. ಅಲ್ ಖೈದಾ ಸಲಹೆಯ ಮೇರೆಗೆ ತಾಲಿಬಾನ್ ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಂಡಿತ್ತು. ಇದೀಗ ಈ ಷರತ್ತುಗಳಿಗೆ ತಾಲಿಬಾನ್ ಎಷ್ಟರಮಟ್ಟಿಗೆ ಬದ್ಧವಾಗಿರುವುದೆಂಬ ಕುತೂಹಲ ಮೊಳೆತಿದೆ. 

SCROLL FOR NEXT