ವಿದೇಶ

ತಾಲಿಬಾನ್ ನಿಂದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ನೇಮಕ

Harshavardhan M

ಕಾಬೂಲ್: ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಹಂಗಾಮಿ ಮುಖ್ಯಸ್ಥರನ್ನಾಗಿ ತಾಲಿಬಾನ್ ಮೊಹಮ್ಮದ್ ಇಡ್ರಿಸ್ ಎಂಬುವವರನ್ನು ನೇಮಕ ಮಾಡಿರುವುದಾಗಿ ತಿಳಿದುಬಂದಿದೆ. ತೀವ್ರ ಆರ್ಥಿಕ ಮುಗ್ಗಟ್ಟನ್ನು ದೇಶ ಎದುರಿಸುತ್ತಿರುವ ಸಮಯದಲ್ಲಿ ತಾಲಿಬಾನ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 

ಅಡುಗೆ ತೈಲ, ಗೋಧಿ ಹಿಟ್ಟು ಬೆಲೆ ಶೇ.35 ಪ್ರತಿಶತ ಹೆಚ್ಚಿದೆ. ಬ್ಯಾಂಕುಗಳು, ಔಷಧ ಅಂಗಡಿಗಳು ರಾಜಧಾನಿ ಕಾಬೂಲಿನಲ್ಲೇ ಮುಚ್ಚಿವೆ. ದೇಶದ ಎಟಿಎಂಗಳಲ್ಲಿ ಹಣವಿಲ್ಲ, ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇಂಥಾ ಸಮಯದಲ್ಲಿ ದೇಶವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಆರ್ಥಿಕ ಪ್ರಗತಿಗೆ ಏನು ಮಾಡಲಿದೆ ಎನ್ನುವುದನ್ನು ತಿಳಿಯಲು ಜಗತ್ತು ಕಾದಿದೆ.

ತಾಲಿಬಾನ್ ವಕ್ತಾರ ಜಬೀಯುಲ್ಲ ಮುಜಾಹಿದ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರನ್ನಾಗಿ ಮೊಹಮ್ಮದ್ ಇಡ್ರಿಸ್ ಅವರನ್ನು ನೇಮಕ ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮೊಹಮ್ಮದ್ ಇಡ್ರಿಸ್ ಅವರು ಈ ಹಿಂದೆ ತಾಲಿಬಾನ್ ಆರ್ಥಿಕ ಸಲಹಾ ಸಮಿತಿಯ ಸದಸ್ಯರಾಗಿದ್ದರು ಎಂದವರು ಹೇಳಿದ್ದಾರೆ. 

ಮೊಹಮ್ಮದ್ ಅವರ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅರ್ಹತೆ ಮತ್ತಿತರ ಮಾಹಿತಿ ಇದುವರೆಗೂ ತಿಳಿದುಬಂದಿಲ್ಲ. ಕಳೆದ 20 ವರ್ಷಗಳಿಂದ ತಾಲಿಬಾನ್ ಆರ್ಥಿಕ ಸಮಿತಿ ಭೂಗತವಾಗಿ ಕಾರ್ಯಾಚರಿಸುತ್ತಿತ್ತು. ಹೀಗಾಗಿ ಹೊರಜಗತ್ತಿಗೆ ಮೊಹಮ್ಮದ್ ಇಡ್ರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎನ್ನುವುದು ಕುತೂಹಲದ ವಿಷಯವಾಗಿದೆ.

SCROLL FOR NEXT