ವಿದೇಶ

ಜಾಗತಿಕವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಕುಸಿತ: ವಿಶ್ವ ಆರೋಗ್ಯ ಸಂಸ್ಥೆ

Srinivas Rao BV

ಜನೀವಾ: ಜಾಗತಿಕವಾಗಿ ವರದಿಯಾಗುತ್ತಿರುವ ಕೊರೋನಾ ಪ್ರಕರಣಗಳು 4.5 ಮಿಲಿಯನ್ ಸೋಂಕುಗಳಿಗೆ ಸ್ಥಿರವಾಗಿದ್ದು, ಕಳೆದ ಎರಡು ತಿಂಗಳು ಏರುಗತಿಯಲ್ಲಿದ್ದ ಸೋಂಕು ಪ್ರಸರಣ ಕಡಿಮೆಯಾದಂತೆ ಕಾಣುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸಾಪ್ತಾಹಿಕ ಮೌಲ್ಯಮಾಪನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಸೋಂಕು ಪಶ್ಚಿಮ ಪೆಸಿಫಿಕ್ ಹಾಗೂ ಅಮೆರಿಕಾಗಳಲ್ಲಿ ಅನುಕ್ರಮವಾಗಿ ಶೇ.20 ಹಾಗೂ ಶೇ.8 ರಷ್ಟು ಏರಿಕೆಯಾಗುತ್ತಿದೆ. ರೋಗದ ಪ್ರಮಾಣ ಏರಿಕೆ ಸ್ಥಿರವಾಗಿದ್ದು, ಕೆಲವು ಭಾಗಗಳಲ್ಲಿ ಇಳಿಕೆಯಾಗಿದೆ.

ಅಮೆರಿಕ, ಇರಾನ್, ಭಾರತ, ಬ್ರಿಟನ್, ಬ್ರೆಜಿಲ್ ಗಳಲ್ಲಿ ಹೆಚ್ಚಿನ ಪ್ರಕರಣಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಂಗಳವಾರ ಮೌಲ್ಯಮಾಪನ ವರದಿ ಬಿಡುಗಡೆಯಾಗಿದ್ದು, ಜಾಗತಿಕವಾಗಿ 68,000 ಹೊಸ ಪ್ರಕರಣಗಳು ವರದಿಯಾಗಿದ್ದು, ಯುರೋಪ್ ಹಾಗೂ ಅಮೆರಿಕದಲ್ಲಿ ಹೆಚ್ಚಿನ ಸಾವಿನ ಪ್ರಕರಣಗಳು ವರದಿಯಾಗಿವೆ.

ಇನ್ನು ಡಬ್ಲ್ಯುಹೆಚ್ಒದ ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ ಲಸಿಕೆಗಳು ತೀವ್ರ ಕೊರೋನಾ ರೋಗದಿಂದ ರಕ್ಷಣೆ ನೀಡುತ್ತವೆ ಎಂಬುದನ್ನು ಕಂಡುಕೊಂಡಿದೆ. ಆದರೆ ಡೆಲ್ಟಾ ಮಾದರಿಯ ವೈರಾಣು ಸೋಂಕಿನಿಂದ ತಪ್ಪಿಸಿಕೊಳ್ಳುವುದಕ್ಕೆ ಈಗಿನ ಲಸಿಕೆಗಳು ಕಡಿಮೆ ಪರಿಣಾಮಕಾರಿ ಎಂದೂ ಹೇಳಿದೆ.

ಲಸಿಕೆಗಳು ಆಸ್ಪತ್ರೆಗೆ ಸೇರುವುದು ಹಾಗೂ ಸಾವಿನಿಂದ ಮಾತ್ರ ರಕ್ಷಣೆ ನೀಡುತ್ತವೆಯೇ ಹೊರತು ಸೋಂಕು ತಗುಲುವುದರಿಂದ ಅಲ್ಲ ಎಂದು ಈ ಹಿಂದಿನ ಸಂಶೋಧನೆಗಳಿಂದ ತಿಳಿದುಬಂದಿದೆ.

SCROLL FOR NEXT