ವಿದೇಶ

ಕಾಬೂಲ್ ವಿಮಾನ ನಿಲ್ದಾಣ ಬಾಂಬ್ ಸ್ಫೋಟದಲ್ಲಿ ಕನಿಷ್ಠ 95 ಅಫ್ಘಾನಿಸ್ತಾನಿಗಳು ಮೃತಪಟ್ಟಿದ್ದಾರೆ: ಅಧಿಕಾರಿಗಳು

Lingaraj Badiger

ಕಾಬೂಲ್: ಕಾಬೂಲ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಗುರುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 95 ಅಫ್ಘಾನಿಸ್ತಾನಿಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಮೃತದೇಹಗಳನ್ನು ಸ್ಥಳಾಂತರಿಸುವಲ್ಲಿ ಇತರರು ಭಾಗಿಯಾಗಿದ್ದರಿಂದ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡಲು ಅಧಿಕಾರವಿಲ್ಲದ, ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವ ವಿಮಾನಗಳು ಶುಕ್ರವಾರ ಹೊಸ ತುರ್ತುಸ್ಥಿತಿಯೊಂದಿಗೆ ಪುನರಾರಂಭಗೊಂಡಿವೆ. 

ಅಫ್ಘಾನಿಸ್ತಾನ ಮತ್ತು ಅಮೆರಿಕ ಅಧಿಕಾರಿಗಳು ಈ ಮೊದಲು ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 60 ಅಫ್ಘಾನಿಸ್ತಾನಿಗಳು ಮತ್ತು 13 ಅಮೆರಿಕ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

ಈ ಮಧ್ಯೆ, ರಾಜಧಾನಿ ಕಾಬೂಲ್‌ನಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಯಲ್ಲಿ ಮೃತರಾದವರ ಸಂಖ್ಯೆ 103ಕ್ಕೆ ಏರಿಕೆಯಾಗಿದ್ದು, ಈ ಸ್ಫೋಟ ಕನಿಷ್ಠ 90 ಅಫಘಾನ್ ನಾಗರಿಕರನ್ನು ಬಲಿ ತೆಗೆದುಕೊಂಡಿವೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಪೆಂಟಗನ್ ಈ ಹಿಂದೆ 13 ಸೈನಿಕರ ಸಾವನ್ನು ದೃಢಪಡಿಸಿದೆ. ಕಾಬೂಲ್ ವಿಮಾನ ನಿಲ್ದಾಣ ಮತ್ತು ಅದರ ಹೊರವಲಯವನ್ನು ಗುರಿಯಾಗಿಸಿಕೊಂಡು ಗುರುವಾರ, ಕನಿಷ್ಠ ನಾಲ್ಕು ಸ್ಫೋಟಗಳು ನಡೆದವು. ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪು ಈ ದಾಳಿಯ ಹೊಣೆ ಹೊತ್ತಿದೆ ಎಂದು ವರದಿಯಾಗಿದೆ.

SCROLL FOR NEXT