ಹಾಲಿವುಡ್ ನಟ ಎಡ್ ಅಸ್ನರ್ 
ವಿದೇಶ

ಏಳು ಬಾರಿ ಎಮ್ಮಿ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಖ್ಯಾತ ಹಾಲಿವುಡ್ ನಟ ಎಡ್ ಅಸ್ನರ್ ನಿಧನ

ಪ್ರತಿಷ್ಠಿತ ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಗೆ 7 ಬಾರಿ ಭಾಜನರಾಗಿದ್ದ ಖ್ಯಾತ ನಟ ಎಡ್ ಅಸ್ನರ್ (91) ಆ.30 ರಂದು ನಿಧನರಾಗಿದ್ದಾರೆ. 

ವಾಷಿಂಗ್ ಟನ್: ಪ್ರತಿಷ್ಠಿತ ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಗೆ 7 ಬಾರಿ ಭಾಜನರಾಗಿದ್ದ ಖ್ಯಾತ ನಟ ಎಡ್ ಅಸ್ನರ್ (91) ಆ.30 ರಂದು ನಿಧನರಾಗಿದ್ದಾರೆ. 

ದಿ ಮೇರಿ ಟೈಲರ್ ಮೂರ್ ಶೋ ನಟನ ಸಾರ್ವಜನಿಕ ಸಂಪರ್ಕ ವಿಭಾಗ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಎಡ್ ಅಸ್ನರ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕುಟುಂಬ ಸದಸ್ಯರು ಈ ಸುದ್ದಿಯನ್ನು ದೃಢಪಡಿಸಿದ್ದು "ನಮ್ಮ ತಂದೆ ಇಂದು ಬೆಳಿಗ್ಗೆ ನಿಧನರಾದರು ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ, ನೋವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಿಮ್ಮನ್ನು ಪ್ರೀತಿಸುತ್ತೇವೆ ಅಪ್ಪ" ಎಂದು ಬರೆದಿದ್ದಾರೆ.

ಲೆಜೆಂಡರಿ ನಟ 50 ರಲ್ಲಿ ಶೋಬಿಜ್ ಗೆ ಪ್ರವೇಶಿಸಿದ್ದರು. ಅತ್ಯಂತ ಜನಪ್ರಿಯ ದಿ ಮೇರಿ ಟೈಲರ್ ಮೂರ್ ಶೋ ಮೂಲಕ ಎಡ್ ಅಸ್ನರ್ ಜನಪ್ರಿಯತೆ ಗಳಿಸಿ ಹಾಲಿವುಡ್ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಂಡರು. ಈ ಸರಣಿಯ 166 ಸಂಚಿಕೆಗಳಲ್ಲಿ ಆನ್ಸರ್ ನಟಿಸಿದ್ದು 7 ವರ್ಷಗಳ ಸುದೀರ್ಘ ಪಯಣ ಇದಾಗಿತ್ತು.

ಈ ಹಾಸ್ಯ ಸರಣಿಯ ನಟನೆ ಜನಪ್ರಿಯತೆ ಉತ್ತುಂಗದಲ್ಲಿರುವಾಗಲೇ ಎಡ್ ಅಸ್ನರ್ "ಲೌ ಗ್ರಾಂಟ್" ಎಂಬ ಮತ್ತೊಂದು ಶೋ ಪ್ರಾರಂಭಿಸಿದರು. ಇದರಲ್ಲಿ ನೂರಕ್ಕೂ ಹೆಚ್ಚನ ಸಂಚಿಕೆಗಳಲ್ಲಿ ನಟಿಸಿ ಮತ್ತಷ್ಟು ಜನಪ್ರಿಯತೆ ಹೊಂದಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT