ಸ್ಫೋಟ (ಸಂಗ್ರಹ ಚಿತ್ರ) 
ವಿದೇಶ

ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ: 8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ

ಸಿಡಿ ಮದ್ದು ತುಂಬಿದ ಡ್ರೋನ್  ನೈಋತ್ಯ ಸೌದಿ ಅರೇಬಿಯಾದಲ್ಲಿನ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದು ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರೆ, ಪ್ರಯಾಣಿಕ ವಿಮಾನವೊಂದು ಹಾನಿಗೀಡಾಗಿದೆ.

ದುಬೈ: ಸಿಡಿ ಮದ್ದು ತುಂಬಿದ ಡ್ರೋನ್  ನೈಋತ್ಯ ಸೌದಿ ಅರೇಬಿಯಾದಲ್ಲಿನ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದು ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರೆ, ಪ್ರಯಾಣಿಕ ವಿಮಾನವೊಂದು ಹಾನಿಗೀಡಾಗಿದೆ.

ಯೆಮೆನ್ ನಲ್ಲಿ ಯುದ್ಧದಲ್ಲಿ ನಿರತರಾಗಿರುವಾಗ ಸೌದಿ ಅರೇಬಿಯಾದಲ್ಲಿ ಈ ಘಟನೆ ನಡೆದಿದೆ. ದಾಳಿಗೆ ತಕ್ಷಣಕ್ಕೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. 24 ಗಂಟೆಗಳಲ್ಲಿ ಸಂಭವಿಸುತ್ತಿರುವ ಇಂತಹ ಎರಡನೇ ದಾಳಿ ಇದಾಗಿದೆ.

ಈ ಹಿಂದಿನ ದಾಳಿಯಲ್ಲಿ ಸಾವು-ನೋವುಗಳು ಸಂಭವಿಸಿರಲಿಲ್ಲ. ಸೌದಿ ನೇತೃತ್ವದ ಮಿಲಿಟರಿ ಪಡೆ ಇರಾನ್ ಬೆಂಬಲಿತ ಶಿಯಾ ಬಂಡಾಯದವರ ವಿರುದ್ಧ ಯೆಮೆನ್ ನಲ್ಲಿ ಯುದ್ಧದಲ್ಲಿ ಕೈ ಜೋಡಿಸಿದೆ. ತಕ್ಷಣಕ್ಕೆ ಸರ್ಕಾರದಿಂದ ಡ್ರೋನ್ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿಲ್ಲ.

2015 ರಿಂದಲೂ ಯೆಮೆನ್ ನ ಹೌತಿ ಬಂಡಾಯದವರು ಸೌದಿ ವಿರುದ್ಧ ಯುದ್ಧದಲ್ಲಿ ತೊಡಗಿದ್ದು ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India-Pakistan ಯುದ್ಧವನ್ನು ನಾನು ತಡೆಯದೇ ಹೋಗಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭ; ಸಂಸತ್ತು ನೆಸ್ಸೆಟ್ ಭಾಷಣ ಮಾಡುವ ಮೊದಲ ಭಾರತ ಪ್ರಧಾನಿ-Video

ಮಾಜಿ ಪ್ರೇಯಸಿಯ ಮದುವೆಗೆ ಬಂದು ಗುಂಡು ಹಾರಿಸಿದ ಭಗ್ನ ಪ್ರೇಮಿ, Video ವೈರಲ್!

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ನ್ ಮಾಡುವ ವಿಚಾರಕ್ಕೆ ಗಲಾಟೆ: 65ರ ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ, ರೌಡಿಶೀಟ್ ಗೆ ಪೊಲೀಸರ ಸಿದ್ಧತೆ? Video

SCROLL FOR NEXT