ವಿದೇಶ

ಒಮಿಕ್ರಾನ್ ಗಿಂತ ಈಗಲೂ ಡೆಲ್ಟಾ ವೈರಾಣುವೇ ತಲೆನೋವು: ವಿದೇಶಿ ತಜ್ಞರಿಂದ ಮೂರನೇ ಡೋಸ್ ಗೆ ಸಲಹೆ

Harshavardhan M

ಪ್ಯಾರಿಸ್: ಹೊಸದಾಗಿ ತಲೆನೋವಿಗೆ ಕಾರಣವಾಗಿರುವ ಒಮಿಕ್ರಾನ್ ಕೊರೊನಾ ರೂಪಾಂತರಿ ತಳಿಯ ವಿರುದ್ಧ ಜನರು ಹಾಕಿಸಿಕೊಂಡಿರುವ ಲಸಿಕೆ ಪರಿಣಾಮಕಾರಿಯೇ ಇಲ್ಲವೇ ಎಂಬುದರ ಕುರಿತು ಖಚಿತ ಮಾಹಿತಿ ಲಭ್ಯವಿಲ್ಲ. 

ಒಮಿಕ್ರಾನ್ ವಿರುದ್ಧ ಲಸಿಕೆಗಳ ಸಾಮರ್ಥ್ಯ ತಿಳಿಯಲು ಪ್ರಯೋಗಗಳು ನಡೆದಿದ್ದು, ಕೆಲ ವಾರಗಳಲ್ಲೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ. ಈ ನಡುವೆ ಇಂದಿಗೂ ಒಮಿಕ್ರಾನ್ ಗಿಂತ ಹೆಚ್ಚು ಗಂಭೀರವಾದುದು ಡೆಲ್ಟಾ. ಪ್ರಕರಣಗಳ ಸಂಖ್ಯೆ ಮತ್ತು ಅಪಾಯಕಾರಿ ಪ್ರಮಾಣದ ವಿಚಾರಕ್ಕೆ ಬಂದಾಗ ಇಂದಿಗೂ ಡೆಲ್ಟಾ ವೈರಾಣು ತಳಿಯೇ ಹೆಚ್ಚಿನ ತಲೆನೋವನ್ನು ವಿಧಿಸುತ್ತಿದೆ ಎಂದು ಅಂತಾರಾಷ್ಟ್ರೀಯ ವೈರಾಣು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. 

ಬ್ರಿಟನ್ ನಲ್ಲಿ ಡೆಲ್ಟಾ ವೈರಾಣು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಸರ್ಕಾರ ಜನರನ್ನು ಮೂರನೇ ಡೋಸ್ ಪಡೆಯಲು ಸಲಹೆ ನೀಡುತ್ತಿದೆ. ಲಸಿಕೆ ಪಡೆಯುವುದರಿಂದ ಡೆಲ್ಟಾ ವೈರಾಣುವಿನಿಂದ ಒದಗುವ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ಅಲ್ಲಿನ ವೈದ್ಯರು ಸಲಹೆ ನೀಡುತ್ತಿದ್ದಾರೆ.

SCROLL FOR NEXT