ಸಾಂದರ್ಭಿಕ ಚಿತ್ರ 
ವಿದೇಶ

2022ರಲ್ಲಿ ಹೆಚ್-1 ಬಿ ಸೇರಿದಂತೆ ಹಲವಾರು ವೀಸಾ ಅರ್ಜಿದಾರರ ವೈಯಕ್ತಿಕ ಸಂದರ್ಶನ ಕೈ ಬಿಟ್ಟ ಅಮೆರಿಕ!

ಕೋವಿಡ್-19 ಪ್ರಕರಣಗಳ ಹೆಚ್ಚಳದ ಆತಂಕದ ನಡುವೆ, ಹೆಚ್-1ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ  2022 ರಲ್ಲಿ ಹೆಚ್-1 ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವೀಸಾ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ  ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ ಘೋಷಿಸಿದೆ. 

ವಾಷಿಂಗ್ಟನ್: ಕೋವಿಡ್-19 ಪ್ರಕರಣಗಳ ಹೆಚ್ಚಳದ ಆತಂಕದ ನಡುವೆ, ಹೆಚ್-1ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ  2022 ರಲ್ಲಿ ಹೆಚ್-1 ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವೀಸಾ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ  ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ ಘೋಷಿಸಿದೆ. 

ಹೆಚ್- 1 ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಂದ ಪ್ರತಿವರ್ಷ ಬರುವ ಸಹಸ್ರಾರು ನೌಕರರ ಮೇಲೆ ತಂತ್ರಜ್ಞಾನ ಕಂಪನಿಗಳು ಅವಲಂಬಿತವಾಗಿವೆ.

ವಿಶೇಷ ವೃತ್ತಿಪರರು ( ಹೆ-1ಬಿ ವೀಸಾ)  ಟ್ರೈನಿ ಅಥವಾ ವಿಶೇಷ ಶಿಕ್ಷಣಕ್ಕೆ ಆಗಮಿಸುವವರು ( ಹೆಚ್-3 ವೀಸಾ)  ಇಂಟರ್ ಕಂಪನಿ ವರ್ಗಾವಣೆದಾರರು (ಎಲ್ ವೀಸಾ) ಅಸಾಧಾರಣ ಸಾಮರ್ಥ್ಯ ಅಥವಾ ಸಾಧನೆ ಹೊಂದಿರುವವರು ( ಒ ವೀಸಾ) ಅಥ್ಲೆಟಿಕ್ಸ್ , ಕಲಾವಿದರು ಮತ್ತು ಎಂಟರ್ ಟ್ರೈನರ್ಸ್ ( ಪಿ ವೀಸಾ) ಮತ್ತು  ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ( ಕ್ಯೂ ವೀಸಾ) ಅರ್ಜಿದಾರರಿಗೆ ಡಿಸೆಂಬರ್ 31, 2022ರವರೆಗೂ ವೈಯಕ್ತಿಕ ಸಂದರ್ಶನಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ ಗುರುವಾರ ತಿಳಿಸಿದೆ. 

ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಇನ್ನೂ ವೈಯಕ್ತಿಕವಾಗಿ ಸಂದರ್ಶನದ ಅಗತ್ಯವಿರಬಹುದು ಮತ್ತು ಸ್ಥಳೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಅರ್ಜಿದಾರರು ಈ ಅಭಿವೃದ್ಧಿ ಮತ್ತು ಪ್ರಸ್ತುತ ಕಾರ್ಯಾಚರಣೆಯ ಸ್ಥಿತಿ ಮತ್ತು ಸೇವೆಗಳ ಬಗ್ಗೆ ಹೆಚ್ಚು ವಿವರವಾದ ಮಾಹಿತಿಗಾಗಿ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ವೆಬ್‌ಸೈಟ್‌ಗಳನ್ನು ಪರಿಶೀಲಿಸಬೇಕು ಎಂದು ಅದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT