ರಸ್ತೆ, ರೈಲ್ವೆ ಹಳಿ ಮೇಲೆ ಚಲಿಸಬಲ್ಲ ವಿಶ್ವದ ಮೊದಲ ದ್ವಿ ಮಾದರಿಯ ವಾಹನ ಪರಿಚಯಿಸಿದ ಜಪಾನ್!
ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಜಪಾನ್ ಶನಿವಾರ ಪರಿಚಯಿಸಿದೆ. ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ ಮತ್ತು ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್‌ಗಳಲ್ಲಿ ಚಲಿಸುತ್ತದೆ.
ಕೈಯೋ: ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಜಪಾನ್ ಶನಿವಾರ ಪರಿಚಯಿಸಿದೆ. ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ ಮತ್ತು ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್‌ಗಳಲ್ಲಿ ಚಲಿಸುತ್ತದೆ. ಈ ವಾಹನ ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು ಅದು ರೈಲು ಹಳಿಗಳನ್ನು ಹೊಡೆದಾಗ ಇಳಿಯುತ್ತದೆ. ಇದೇ ಈ ವಾಹನದ ವೈಶಿಷ್ಟವಾಗಿದೆ.
ಮುಂಭಾಗದ ಟೈರ್‌ಗಳನ್ನು ಹಳಿಯಿಂದ ಮೇಲಕ್ಕೆತ್ತಲಾಗುತ್ತದೆ ಮತ್ತು ಹಿಂದಿನ ಚಕ್ರಗಳು ಡಿಎಂವಿ ವಾಹನವನ್ನು ರೈಲುಮಾರ್ಗಕ್ಕೆ ಮುಂದೂಡಲು ಕೆಳಗಡೆ ಇರುತ್ತವೆ. ರೈಲು ಹಳಿಯಲ್ಲಿ ಸುಲಭವಾಗಿ ರೈಲಿನಂತಹ ಮಾಡ್ಯೂಲ್ ಆಗಿ ಪರಿಣಾಮಕಾರಿಯಾಗಿ ಬದಲಾಗುವ ಈ ವೈಶಿಷ್ಟ್ಯವು ಈ ರೀತಿಯ ಮೊದಲನೆಯದು.
ವರದಿಗಳ ಪ್ರಕಾರ, ಈ ವಾಹನ ಸುಮಾರು 21 ಪ್ರಯಾಣಿಕರನ್ನು ಕರೆದೊಯ್ಯಲಿದೆ ಮತ್ತು ಹಳಿ ಮೇಲೆ ಗಂಟೆಗೆ 60 ಕಿ.ಮೀ ವೇಗದಲ್ಲಿ, ಸಾರ್ವಜನಿಕ ರಸ್ತೆ ಮೇಲೆ ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸಲಿದೆ.
ಸಣ್ಣ ಪಟ್ಟಣಗಳಿಗೆ ಈ ವಾಹನಗಳು ನೆರವಾಗಲಿವೆ ಎಂದು ಎಎಸ್ ಎ ಕೋಸ್ಟ್ ರೈಲ್ವೆ ಕಂಪನಿಯ ಸಿಇಒ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಡೀಸೆಲ್ ನಿಂದ ಚಲಿಸುವ ಈ ವಾಹನಗಳು ವಿವಿಧ ಬಣ್ಣಗಳಲ್ಲಿ ಬಂದಿವೆ. ಇದು ಅನೇಕ ಸಣ್ಣ ಪಟ್ಟಣಗಳನ್ನು ಸಂಪರ್ಕಿಸುವ ಮೂಲಕ ಆಕರ್ಷಕ ಕಡಲ ತೀರದ ಪ್ರದೇಶಗಳನ್ನು ನೋಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಿವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.